ಮುದಿ ರೈತ

ಮೂಲ ಹಿಂದಿ - ಹರಿವಂಶರಾಯ್ ಬಚ್ಚನ್ 
ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ಇದೋ ಮುಗಿದುಹೋಯಿತು ನನ್ನ ಕೆಲಸ 
ಇನ್ನೇನಿದ್ದರೂ ನಿದ್ದೆ, ಆಲಸ. 
ಇನ್ನೇಕೆ ಮಚ್ಚು, ಇನ್ನೇಕೆ ಮಂಕರಿ,
ಇನ್ನೇಕೆ ಸನಿಕೆ, ಗುದ್ದಲಿ, 
        ಹಾರೆ, ನೇಗಿಲು, ಎಲ್ಲಾ ಕೊಟ್ಟುಬಿಟ್ಟೆ. 

ನನ್ನ ಮಣ್ಣಿನಲ್ಲಿ ಏನು ಬರೆದಿತ್ತೋ 
ಮೊಗೆಮೊಗೆದು ತೆಗೆದೆ ನಾನು
ಕಣ್ಣೀರು, ಬೆವರು, ರಕ್ತ ಹರಿಸಿ. 
ಕಡಿದೆ,
ರಟ್ಟೆ ಬೀಳುವವರೆಗೂ ದುಡಿದೆ,
ಈಗ ಸಾವು ಬಂದರೂ ನನ್ನ ಮಣ್ಣಲ್ಲಿ ಏನು ಸಿಕ್ಕೀತು ಅದಕ್ಕೆ? ಲೊಟ್ಟೆ.  

ಕಾಮೆಂಟ್‌ಗಳು

  1. अब समाप्‍त हो चुका मेरा काम।
    करना है बस आराम ही आराम।
    अब न खुरपी, न हँसिया,
    न पुरवट, न ल‍‍ढ़िया,
    न रतरखाव, न हर, न हेंगा।

    मेरी मिट्टी में जो कुछ निहित था,
    उसे मैंने जोत-वो,
    अश्रु स्‍वेद-रक्‍त से सींच निकाला,
    काटा,
    खलिहान का ख्‍लिहाल पाटा,
    अब मौत क्‍या ले जाएगी मेरी मिट्टी से ठेंगा।

    ಪ್ರತ್ಯುತ್ತರಅಳಿಸಿ
  2. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)