ಬಾಹುಬಲಿ

ಸಿ ಪಿ ರವಿಕುಮಾರ್ 

ಅವನ ಬಾಹುಗಳಲ್ಲಿ ಬಲವಿತ್ತು
ಮನದಲ್ಲಿ ಹಂಬಲವಿತ್ತು
ಬಂಜರಿನಲ್ಲೂ ಬಿತ್ತಿ ಬೆಳೆಯುವ ಛಲವಿತ್ತು.

ಯಾವ ಸಿಡಿಲು ತಾಕಿತೋ
ನಿಂತ ದಿಗಂಬರನಾಗಿ ಎಲ್ಲಾ ಬಿಟ್ಟು
ಬೆಟ್ಟದ ಮೇಲೇರಿ ಕಣ್ ತೆರೆದು ಅಜಾತಶತ್ರು

ಎಲ್ಲವನ್ನೂ ತ್ಯಾಗ ಮಾಡು
ಕೊಟ್ಟುಬಿಡು ಬಲಿ
ನಿನ್ನ ನಡೆ, ನಿನ್ನ ನುಡಿ

ಬಿತ್ತಿ
           ಬೆಳೆದದ್ದು
                   ಸಾಕು ಬಾಹುಬಲಿ,
ಬಿಟ್ಟಿ
            ಬಂದದ್ದು
                  ಉಣ್ಣುವುದ ಕಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)