ನನಗಿಷ್ಟವಾದ ಉತ್ತರ
ಸಿ ಪಿ ರವಿಕುಮಾರ್
ನಿನ್ನನ್ನು ಪ್ರಶ್ನೆ ಕೇಳಿದಾಗ ಬೇಕಾದದ್ದು
ನನಗಿಷ್ಟವಾದ ಉತ್ತರ
ನನ್ನ ಮನಸ್ಸಿನಲ್ಲಿ ಈಗಾಗಲೇ ಇರುವ ನಿರ್ಧಾರ
ಹುಡುಕುತ್ತಿದೆ ನಿನ್ನಲ್ಲಿ ಪುನರುಚ್ಚಾರ
ನನ್ನ ಪ್ರಶ್ನೆಗೆ ಇರುವುದು ಒಂದೇ ಉತ್ತರ
ಅದು ಈಗಾಗಲೇ ಇದೆ ನನ್ನ ಹತ್ತಿರ
ನನ್ನ ಮನದಾಳದಲ್ಲಿ ಗುಟ್ಟಾಗಿ
ಎ ಅಥವಾ ಬಿ ಇಲ್ಲವೇ ಸಿ ಅಥವಾ ಡಿ
ಆಬ್ಜೆಕ್ಟಿವ್ ಪ್ರಶ್ನೆಗೆ ಯಾವಾಗಲೂ ಒಂದೇ ಸಬ್ಜೆಕ್ಟಿವ್ ಉತ್ತರ
ನೀನು ಮಾಡಬೇಕಾದದ್ದು ಕೇವಲ ಬಿತ್ತರ
ಸಿಡಿಮಿಡಿಗೊಳ್ಳುತ್ತೇನೆ ನಾನು
ನನ್ನ ಮನದ ಮಾತನ್ನು ಆಡದಿದ್ದಾಗ ನೀನು
ನಿನ್ನ ಉತ್ತರಕ್ಕೆ ನನಗೆ ಕೊಡಬೇಡ ಸ್ಪಷ್ಟನೆ
ಕೇಳಲು ವ್ಯವಧಾನ ಯಾರಿಗಿದೆ?
ಟಿಕ್ ಮಾಡುವುದನ್ನು ನೀನು ಕಲಿಯಬೇಕು, ಅದರಲ್ಲೂ
ಸರಿಯಾದ ಒಂದೇ ಉತ್ತರದ ಮುಂದೆ
ಮುಂದೆ ಹೋಗಲು ಇರುವ ಮಾರ್ಗವಿದೊಂದೇ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ನಿನ್ನನ್ನು ಪ್ರಶ್ನೆ ಕೇಳಿದಾಗ ಬೇಕಾದದ್ದು
ನನಗಿಷ್ಟವಾದ ಉತ್ತರ
ನನ್ನ ಮನಸ್ಸಿನಲ್ಲಿ ಈಗಾಗಲೇ ಇರುವ ನಿರ್ಧಾರ
ಹುಡುಕುತ್ತಿದೆ ನಿನ್ನಲ್ಲಿ ಪುನರುಚ್ಚಾರ
ನನ್ನ ಪ್ರಶ್ನೆಗೆ ಇರುವುದು ಒಂದೇ ಉತ್ತರ
ಅದು ಈಗಾಗಲೇ ಇದೆ ನನ್ನ ಹತ್ತಿರ
ನನ್ನ ಮನದಾಳದಲ್ಲಿ ಗುಟ್ಟಾಗಿ
ಎ ಅಥವಾ ಬಿ ಇಲ್ಲವೇ ಸಿ ಅಥವಾ ಡಿ
ಆಬ್ಜೆಕ್ಟಿವ್ ಪ್ರಶ್ನೆಗೆ ಯಾವಾಗಲೂ ಒಂದೇ ಸಬ್ಜೆಕ್ಟಿವ್ ಉತ್ತರ
ನೀನು ಮಾಡಬೇಕಾದದ್ದು ಕೇವಲ ಬಿತ್ತರ
ಸಿಡಿಮಿಡಿಗೊಳ್ಳುತ್ತೇನೆ ನಾನು
ನನ್ನ ಮನದ ಮಾತನ್ನು ಆಡದಿದ್ದಾಗ ನೀನು
ನಿನ್ನ ಉತ್ತರಕ್ಕೆ ನನಗೆ ಕೊಡಬೇಡ ಸ್ಪಷ್ಟನೆ
ಕೇಳಲು ವ್ಯವಧಾನ ಯಾರಿಗಿದೆ?
ಟಿಕ್ ಮಾಡುವುದನ್ನು ನೀನು ಕಲಿಯಬೇಕು, ಅದರಲ್ಲೂ
ಸರಿಯಾದ ಒಂದೇ ಉತ್ತರದ ಮುಂದೆ
ಮುಂದೆ ಹೋಗಲು ಇರುವ ಮಾರ್ಗವಿದೊಂದೇ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ