ಅರಳು ಮತ್ತು ತೂಕ

ಸಿ ಪಿ ರವಿಕುಮಾರ್ 


ಅರಳು
~~~~


ಎರಡು ವರ್ಷದ ಹಿಂದೆ.
ಕ್ಷೌರದ ಅಂಗಡಿ (ಅಲ್ಲ ಹೇರ್ ಕಟಿಂಗ್ ಸಲೂನ್).
ಐದು ವರ್ಷದ ಮಗು
ಅರಳು ಹುರಿದಹಾಗೆ ಕನ್ನಡ ಮಾತಾಡುತ್ತಿದ್ದ
ಮಾತಾಡಿಸಿದೆ,
ನಿರ್ಭಯವಾಗಿ ಉತ್ತರಿಸಿದ.

ಅವನ ತಾಯಿ
ಕೂದಲು ಕತ್ತರಿಸಿಕೊಂಡಿದ್ದರೂ
ಕುಂಕುಮ ಬಿಟ್ಟಿರಲಿಲ್ಲ

ತನ್ನ ಹರಕು ಇಂಗ್ಲಿಷ್ ನಲ್ಲಿ
ಗದರಿಸಿ ಹೇಳಿದಳು -
ಇಂಗ್ಲಿಷ್ ನಲ್ಲಿ ಮಾತಾಡು
ಅಮ್ಮ ಅಲ್ಲ ಮಮ್ಮಿ ಅನ್ನು
ಮಗು ಮತ್ತು ನಾನು ಪೆಚ್ಚಾಗಿ ಸುಮ್ಮನಾದೆವು.

ಈಗ ಅವನು ಸೇರಿರಬಹುದು ಯಾವುದೋ ಕಾನ್ವೆಂಟು
ಪೂರ್ತಿ ಹರಿದಿರಬಹುದು ನಂಟು.



ತೂಕ
~~~

ಹಿಂದೊಮ್ಮೆ ಹೀಗಿತ್ತು
ಇಂಗ್ಲಿಷ್ ಪತ್ರಿಕೆ
ತೂಕಕ್ಕೆ ಹಾಕಿದರೆ ಎರಡೂವರೆ ರೂಪಾಯಿ
ಕನ್ನಡ ಪತ್ರಿಕೆಗೆ ಎರಡೇ ರೂಪಾಯಿ.
ಇವತ್ತು ಸಾಧಿಸಿದ್ದೇವೆ ಪ್ರಗತಿ -
ಎರಡಕ್ಕೂ ಸಿಕ್ಕುತ್ತಿದೆ ಒಂದೇ ಗತಿ
ಇದರ ರಹಸ್ಯ ಬಿಡಿಸಲೇ?
ಕನ್ನಡ ಪತ್ರಿಕೆಯ ಮುಖಕ್ಕೆ ಆಗಾಗ
ಇಂಗ್ಲಿಷ್ ಜಾಹೀರಾತಿನ ಆರತಿ. 

ಕಾಮೆಂಟ್‌ಗಳು

  1. "ಅರಳು" ಪದ್ಯಕ್ಕೆ ಪಾಲಹಳ್ಳಿ ವಿಶ್ವನಾಥ್ ಅವರು "ಕನ್ನಡ ಕಟ್" ಎಂದು ಮರುನಾಮಕರಣ ಮಾಡಿದ್ದಾರೆ :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)