ಪೋಸ್ಟ್‌ಗಳು

ಜನವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಂಚಲ ಮನಸ್ಸು

ಇಮೇಜ್
ಮೂಲ ಹಿಂದಿ ... ನರೇಂದ್ರ ಶರ್ಮಾ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಈ ನನ್ನ ಮನಸ್ಸು ಅದೆಷ್ಟು ಚಂಚಲ, ಕ್ಷಣದಲ್ಲಿ ಅರಳಿ, ಕ್ಷಣದಲ್ಲಿ ಮುದುಡುವುದು, ಸುಖ ಬಂದಾಗ ಹಿಗ್ಗಲೂ ತಡವಿಲ್ಲ, ದುಃಖವಾದಾಗ ಕುಗ್ಗಲೂ ತಡವಿಲ್ಲ, ಪಾರಿಜಾತದ ಕುಸುಮದಂತೆ ನಗುನಗುತಿದ್ದು ಒಮ್ಮೆಲೇ ಬಾಡಿಹೋಗುವುದು ಮರುಕ್ಷಣ! ಹಿಗ್ಗಿದಾಗ "ಇಡೀ ಜಗತ್ತು ನನ್ನದು!" ಎಂದು ಬೀರುವುದು ಮುಗುಳ್ನಗೆ. ಕುಗ್ಗಿದಾಗ ಅತ್ತು ಕರೆದು "ಜಗದ ಸಹವಾಸವೇ ಬೇಡ ನನಗೆ!" ನಿಜವೆಂದರೆ ಮನದ ದುರ್ಬಲತೆಯ ಮೂಲ ಅಹಂಕಾರವಷ್ಟೇ, ಬೇರೇನಲ್ಲ! ಬುದ್ದಿ ಹೇಳಿದೆ ಎಷ್ಟೋ ಮನಸ್ಸಿಗೆ, ನನ್ನ ಹಿತವಚನಕ್ಕೆ ಸಿಕ್ಕಿದ್ದು ಉಪೇಕ್ಷೆ! ಮಣ್ಣಿನಿಂದ ಬಂದದ್ದು ಈ ಮನಸ್ಸು ಮತ್ತೆ ಮರಳುವುದು ಮಣ್ಣಿನ ಆಟಕ್ಕೆ!

ನಿರೀಕ್ಷಿಸದಿರು ಹಿಂದಿನಂತಹ ಒಲವನ್ನು

ಇಮೇಜ್

ಪರಸ್ಪರ ಸಂಧಿಸುತ್ತೇವೆ ಅಪರಿಚಿತರಂತೆ

ಇಮೇಜ್

ವ್ಯವಸ್ಥೆ ಬದಲಾಯಿಸುತ್ತಿದೆ

ಇಮೇಜ್
ಮೂಲ ಉರ್ದೂ ... ಜಾಹಿದ್ ಮಸೂದ್ ಕನ್ನಡಕ್ಕೆ .. ಸಿ.ಪಿ. ರವಿಕುಮಾರ್ ವ್ಯವಸ್ಥೆ ಬದಲಾಯಿಸುತ್ತಿದೆ. ಹೊಸ ನಾಣ್ಯಗಳು ಚಾಲ್ತಿಗೆ ಬಂದಾಗಿದೆ. ಹೊಸ ರಿಜಿಸ್ಟರುಗಳಲ್ಲಿ ಹಳೆಯ ಅಂಕಿಗಳು ನೊಣಗಳ ಹಾಗೆ ಗುಂಯ್ಗುಡುತ್ತಿವೆ ಕೀಬೋರ್ಡಿಗೆ ಸರಪಳಿಯಿಂದ ಕಟ್ಟಿಹಾಕಿದ ಕೈ ಸಪ್ತವರ್ಣದ ಆಕಾಶದ ಕದತಟ್ಟುವ ಪ್ರಯಾಸ ಮಾಡುತ್ತಿದೆ. ನಿಯಾನ್ ಸೈನಿನಿಂದ ಹೊರಬಂದ ಯುವತಿ ಖಾಲಿಜೋಬುಗಳತ್ತ ಸನ್ನೆ ಮಾಡಿ ಮುಗುಳಗುತ್ತಾಳೆ. ನವಯೌವ್ವನ ತಾಳಿದ ವೃದ್ದರು ನೆಕ್ ಟೈ ಧರಿಸಿ ಫೈವ್ ಸ್ಟಾರ್ ಹೋಟೆಲಿನ ಎದುರು ಎಸೆದ ಬಾಟಲಿಗಳಲ್ಲಿ ಮನಿಪ್ಲಾಂಟ್ ಬೆಳೆಸುವ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ. ಪಾಲಕರು ಮಲಿನ ರಜಾಯಿಗಳಲ್ಲಿ ಹಾಟ್ ವಾಟರ್ ಬಾಟಲ್ ಇಟ್ಟುಕೊಂಡು ಪೂರ್ವಜರ ಕಬ್ರಸ್ಥಾನಗಳ ಕನಸು ಕಾಣುತ್ತಿದ್ದಾರೆ. ಮಕ್ಕಳು ಮೂಸಿಕ್ ಚಾನೆಲ್ ಸಂಗೀತಕ್ಕೆ "ಇಡೀ ಪ್ರಪಂಚವೇ ಒಂದು ಹಳ್ಳಿ" ಹಾಡುತ್ತಾರೆ.

ಇನ್ಫರ್ಮೆಶನ್ ಟೆಕ್ನಾಲಜಿ

ಇಮೇಜ್

ದಾರಿ ತೋರುವ ಚಪ್ಪಲಿಗಳು

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್ ಇರಾಕ್) ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಇರಾಕ್ ದೇಶ ಅನೇಕ ರಾಷ್ಟ್ರಗಳಿಂದ ಬಹಿಷ್ಕಾರಕ್ಕೆ ಒಳಗಾದ ದೇಶ. ಬಹಳಷ್ಟು ದೇಶಗಳು ವ್ಯಾಪಾರ-ವಹಿವಾಟುಗಳ ವಿಷಯದಲ್ಲಿ ಇರಾಕ್ ದೇಶವನ್ನು ದೂರ ಇಟ್ಟಿವೆ. ಅನೇಕ ಯುವಕ-ಯುವತಿಯರು ತಮ್ಮ ದೇಶವನ್ನು ತೊರೆದು ಹೊರಡಲು ಸನ್ನದ್ಧರಾಗುವುದನ್ನು ಕಂಡಾಗ ಕವಯಿತ್ರಿಯ ಮನಸ್ಸು ಪ್ರತಿಕ್ರಯಿಸುತ್ತದೆ. ಹಿಂದೊಮ್ಮೆ ಬೆಟ್ಟಗಳನ್ನು ತೊರೆದು ನಗರಗಳಿಗೆ ಹೊರಟ ಜನರಂತೆಯೇ ತಾಯ್ನಾಡನ್ನು ತೊರೆದು ಜನ ಇನ್ನಿತರ ದೇಶಗಳಿಗೆ ಹೊರಟಿದ್ದಾರೆ. ಹಾಗೆ ಹೊರಟಾಗ ತಾಯ್ನಾಡಿನ ಹೃದಯದ (ರಾಜಧಾನಿ) ಮೂಲಕವೇ ವಿಮಾನ ಹತ್ತಿ ಹಾರಿಹೋಗಬೇಕು. ಹಾಗೆ ಹೋದ ಜನ ಪರದೇಶದಲ್ಲಿ ಸ್ವತಂತ್ರರಾಗಿ ತಲೆ ಎತ್ತಿ ಬದುಕುತ್ತಾರೆಯೇ? ಯಾರದೋ ಮನೆಯ ನೆಲಮಾಳಿಗೆಯಲ್ಲಿ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಸಿಲುಕಿಕೊಳ್ಳುವರೇ? ಅವರು ಕನಸಿದ ಬಣ್ಣಬಣ್ಣದ ಕಿಟಕಿಗಳ ಜಗತ್ತು ಅವರದ್ದಾದೀತೇ? ತಮ್ಮದೇ ದೇಶದಲ್ಲಿ ಅವರು ಇಂತಹ ಕನಸುಗಳನ್ನು ಕಾಣಲು ಸಾಧ್ಯವಿಲ್ಲವೇ?) ಅವನು ಬೆಟ್ಟಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಶೂಗಳನ್ನು ಕಳಚಿಟ್ಟಾಗ ಅವು ನಗರದ ಕಡೆ ಮುಖ ಮಾಡುತ್ತಿದ್ದವು. ತನ್ನ ತಾಯ್ತಾಡು ಸ್ವತಂತ್ರವಾಗಲಿದೆ ಎಂಬುದೇ ಇದರರ್ಥ ಎಂದೇನೂ ಅವನು ಭ್ರಮಿಸಲಿಲ್ಲ. ಈಗ ಅವನು ನಗರದಲ್ಲೇ ವಾಸವಾಗಿದ್ದಾನೆ. ಶೂಗಳನ್ನು ಕಳಚಿಟ್ಟಾಗ ಅವು ಮುಖ ಮಾಡುತ್ತವೆ ದೂರದ ಯಾವುದೋ ನಾಡಿ...

ಏಕಾಂಗಿನಿ ಭೂಮಿ

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್, ಇರಾಕ್) ಕನ್ನಡಕ್ಕೆ ... ಸಿಪಿರವಿಕುಮಾರ್ (ಕವಿತೆಯ ಸ್ವಾರಸ್ಯ: ಇರಾಕ್ ಅನೇಕ ರಾಷ್ಟ್ರಗಳಿಂದ ಬಹಿಷ್ಕೃತವಾದ ದೇಶ. "ಶ್ವೇತಕಾಯ" ಎನ್ನುವುದು ಇಲ್ಲಿ ಯಾವ ಅರ್ಥ ಹೊಮ್ಮಿಸುತ್ತಿದೆ ಎಂದು ಯೋಚಿಸಿ. ಇದೇ ರೀತಿ "ತಾರೆ" ಎನ್ನುವ ಪದದಲ್ಲೂ ನಿಮಗೆ ವಿಶಿಷ್ಟ ಅರ್ಥ ಗೋಚರಿಸಬಹುದು. ತಮ್ಮ ದೇಶದ ವಿರುದ್ಧ ಎಷ್ಟೆಲ್ಲಾ ನಿಂದನೆ/ಬಹಿಷ್ಕಾರಗಳು ಇದ್ದರೂ ದೇಶದ ಜನರಿಗೆ ತಾಯಿನಾಡನ್ನು ಕುರಿತು ಅಭಿಮಾನ ಇದ್ದೇ ಇರುತ್ತದೆ. ತಮ್ಮ ತಾಯಿನಾಡು ಏಕಾಂಗಿನಿ ಕನ್ಯೆಯಂತೆ ಕವಯಿತ್ರಿಗೆ ಕಾಣುತ್ತಾಳೆ. ಎಲ್ಲ ಕಿರಣಗಳನ್ನೂ ತಾನೇ ಕದಿಯುವ ಸೂರ್ಯ ಚಂದ್ರನ ಮೂಲಕ ಒಂದಿಷ್ಟು ಬೆಳಕನ್ನು ದಯಪಾಲಿಸುವುದು ಏನನ್ನು ಸೂಚಿಸುತ್ತದೆ?) ವಿಶ್ವದ ಒಂದಾದರೂ ಶ್ವೇತಕಾಯ ಅವಳಿಗೆ ಆನ್ನುವುದಿಲ್ಲ ಕ್ಯಾರೇ. ನಕ್ಕು ಮಾತಾಡಿಸುವುದಿಲ್ಲ ಒಂದಾದರೂ ತಾರೆ. ಅದೆಷ್ಟೋ ಗುಲಾಬಿ ಅದೆಷ್ಟೋ ಸುಂದರ ಭಾವನೆ ದಫನವಾಗಿದ್ದರೂ ಹಾತೊರೆಯುತ್ತಾಳೆ ಒಂದು ನೋಟಕ್ಕಾಗಿ, ಒಂದು ಗಂಧಕ್ಕಾಗಿ. ಏಕಾಂಗಿನಿಯಾಗಿದ್ದಾಳೆ ಧೂಳಿನ ಗೋಳವಾಗಿದ್ದಾಳೆ ವಸುಂಧರೆ. ಚಂದ್ರನ ತೇಪೆ ಹಾಕಿದ ಅಂಗಿ ನೋಡಿ ಅವಳಿಗೆ ತಿಳಿಯುತ್ತದೆ ಸೂರ್ಯನ ವಂಚನೆ. ಎಲ್ಲ ಕಿರಣಗಳನ್ನೂ ತಾನೇ ಕದ್ದು ತಮ್ಮನ್ನು ಬಾಡಿಗೆದಾರರಂತೆ ಕಾಣುತ್ತಾನೆ.

ಹಣ್ಣು ವ್ಯಾಪಾರಿಯ ಫಿಲಾಸಫಿ

ಇಮೇಜ್
ಮೂಲ ಕವಯಿತ್ರಿ ... ಕಾಜಲ್ ಅಹ್ಮದ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಓ ಗೆಳೆಯಾ, ನೀನು ನೇರಳೆಯ ಹಾಗೆ ಒಂದೇ ಸಲ ಕಚ್ಚಿದರೂ ಉಗಿದುಬಿಡುತ್ತೇನೆ ಒಳಗಿನ ಹೂರಣವನ್ನಷ್ಟೂ. ಓ ನನ್ನ ಪೂರ್ವದ ಪ್ರೇಮಾಗ್ನಿಯೇ, ನೀನು ಒಂದು ಕಿತ್ತಳೆಯ ಹಾಗೆ, ಸಲೀಸಾಗಿ ಕಳಚಿಬಿಡುವೆ. ಕೆಲವೊಮ್ಮೆ ನೀನು ಸೇಬಿನ ಹಾಗೆ. ಸಿಪ್ಪೆ ಸಮೇತವಾದರೂ ಸರಿ ಸಿಪ್ಪೆ ಇಲ್ಲದೆಯೂ ಓಕೆ. ಪಕ್ಕದ ಮನೆಯವರೇ! ನೀವು ಹಣ್ಣಿನ ಚಾಕುವಿನಂತೆ. ನಮ್ಮ ಊಟದ ಮೇಜಿಗೂ ನಿಮಗೂ ಬಿಡಿಸಲಾರದ ನಂಟು. ಬೇಸರಿಸಬೇಡಿ ಹೀಗೆ ಹೇಳಿದೆನೆಂದು: ಹಣ್ಣಿನ ಚಾಕು ನಿಷ್ಟ್ರಯೋಜಕ ವಸ್ತು ಓ ತಾಯ್ನಾಡೇ! ನೀನು ನಿಂಬೆಹಣ್ಣಿನ ಹಾಗೆ. ನಿನ್ನ ಹೆಸರು ಹೇಳಿದಾಗ ಎಲ್ಲರ ಬಾಯಲ್ಲಿ ಊರುತ್ತದೆ ನೀರು. ನನ್ನ ಮೈಮೇಲೆ ಏಳುತ್ತದೆ ಮುಳ್ಳು. ಓ ಅಪರಿಚಿತ! ಕಲ್ಲಂಗಡಿಯಂತೆ ನೀನು, ಖಂಡಿತ. ನಾನು ಚೂರಿಯ ಅವತಾರ ತಾಳದೇ ತಿಳಿಯದು ನಿನ್ನ ಅಂತರಂಗ.

ಹನಿಗವಿತೆಗಳು

ಇಮೇಜ್

ಅದೃಶ್ಯ ದೇವರಿಗೆ ನಿತ್ಯ ಹುಡುಕಾಟ

ಇಮೇಜ್

ಕೆಸರು

ಮೂಲ ಹಿಂದಿ ... ದುಷ್ಯಂತ್ ಕುಮಾರ್ ಕನ್ನಡಕ್ಕೆ : ಸಿ.ಪಿ. ರವಿಕುಮಾರ್ ದುಷ್ಯಂತ್ ಕುಮಾರ್ ಹಿಂದಿಯ ಪ್ರಸಿದ್ಧ ಕವಿ (1933-1975). ಅವರ ಕವಿತೆಗಳಲ್ಲಿ ರಾಜಕೀಯಪ್ರಜ್ಞೆ ದಟ್ಟವಾಗಿದೆ. ಸಾಮಾಜಿಕ ಅನ್ಯಾಯಗಳನ್ನು ಕುರಿತು ಅವರ ಕವಿತೆಗಳಲ್ಲಿ ಕವಿ ದನಿ ಎತ್ತುತ್ತಾರೆ. ಪ್ರಸ್ತುತ ಕವಿತೆಯಲ್ಲೂ ಸಮಾಜ ಮತ್ತು ರಾಜಕಾರಣದ ಮೇಲೆ ಒಂದು ಟಿಪ್ಪಣಿ ಇದೆ. ಇಲ್ಲಿ ದಟ್ಟ ಮಂಜು, ಕೆಸರು, ಸೂರ್ಯ - ಇವೆಲ್ಲವೂ ಪ್ರತಿಮೆಗಳು. ಏನಾಗುತ್ತಿದೆ ಎಂಬುದನ್ನು ಮರೆಮಾಚಲೂ ಕೂಡಾ ರಾಜಕೀಯ ಧುರೀಣರು ಅಸತ್ಯಗಳ ಮಂಜನ್ನು ಸೃಷ್ಟಿಸುತ್ತಾರೆ. ಇದರ ನಡುವೆ ಸತ್ಯವು ಗೋಚರಿಸುವುದು ಕಷ್ಟ. ಸಮಾಜವು ಒಂದು ಕೆಸರಿನ ಹೊಂಡದಂತೆ ಕವಿಗೆ ಕಾಣುತ್ತಿದೆ. ಕಾಲಿಟ್ಟರೆ ಸಾಕು ಕೆಸರು ನಮ್ಮನ್ನು ಎಳೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಕೋಪದಿಂದ ರಕ್ತ ಕುದ್ದರೆ ಅದು ಕ್ಷಣಿಕ ಪ್ರಚೋದನೆಯೇ? "ಇಲ್ಲ, ನಾನಂತೂ ಪ್ರತಿಭಟಿಸುತ್ತೇನೆ, ಕೆಸರಿನಲ್ಲಿ ಮುಳುಗುವವರು ಬೇಕಾದರೆ ಮುಳುಗಲಿ" ಎಂದು ಕವಿ ಸನ್ನದ್ಧನಾದರೂ ತನ್ನ ಪ್ರತಿಭಟನೆಯನ್ನು ನೇರವಾಗಿ ಮಾಡುವಂತಿಲ್ಲ ಎಂಬ ಅಳುಕೂ ಅವನಿಗಿದೆ. ನಮ್ಮ ದೇಶದಲ್ಲಿ ಎಪ್ಪತ್ತನೆಯ ದಶಕದಲ್ಲಿ ಎಮರ್ಜೆನ್ಸಿ ಹೂಡಲಾಗಿತ್ತು ಮತ್ತು ಆ ಕಾಲದಲ್ಲಿ ಎಲ್ಲ ಬಗೆಯ ಸಂವಹನದ ಮೇಲೂ ಪ್ರತಿಬಂಧನಗಳಿದ್ದವು ಎನ್ನುವುದನ್ನು ನೆನೆಸಿಕೊಳ್ಳಿ. ಆಗ ಕೊನೆಯ ಎರಡು ಸಾಲುಗಳಿಗೆ ವಿಶೇಷ ಅರ್ಥ ಸಿಕ್ಕುತ್ತದೆ. ದಟ್ಟ ಮಂಜು ಕವಿದಿದೆ ಎಂದೇಕ...

ಕಲ್ಲಂಗಡಿಯ ಭೂತ

ಇಮೇಜ್
ಸ್ಫೂರ್ತಿ ... ಸಾಗರ್ ಖಯ್ಯಾಮಿ ಅವರ ಉರ್ದು ಕವಿತೆ ಕನ್ನಡ ಅವತರಣ ... ಸಿ.ಪಿ. ರವಿಕುಮಾರ್ ಬೆಂಗಳೂರಲ್ಲಿ ಬಾಡಿಗೆಗೆ ಮನೆಯೊಂದನ್ನು ಹುಡುಕುತ್ತ ಪ್ರಾಣ ಬಿಡುವುದೇ ಏನೋ ಪರದೈವದ ಚಿತ್ತ ಒಂದು ದಿನ ಹೀಗೇ ಅಲೆದಲೆದೂ ದಿನವೆಲ್ಲಾ ಹೊಟ್ಟೆಯಲ್ಲಿ ನಡೆಯುತಿತ್ತು ತಾಳಮದ್ದಳೆ ಮೇಳ ನನ್ನ ಹೊಟ್ಟೆಯು ಕೂಡಾ ತುಸು ದೊಡ್ಡದೇ, ಕ್ಷಮಿಸಿ ! ಮತ್ತು ಜೋಬಿನಲ್ಲಿದ್ದದ್ದು ಅತ್ಯಲ್ಪ ಧನರಾಶಿ! ಇನ್ನೇನು ಸಿಕ್ಕುವುದು ಜುಜುಬಿ ಕಲ್ಲಂಗಡಿ ಹೊರತು? ಹೊತ್ತು ಬರುವಾಗ ಎಡವಿ ಅದು ಕೂಡಾ ಕೈಜಾರಿತು! ಆಯಿತು ನೋಡಿರಿ ಆಗ ಒಂದು ಕರಾಮತ್ತು ಹೊಗೆಯೆದ್ದು ಭುಸ್ ಒಂದು ಭೂತ ಹೊರಬಂತು! ರಸ್ತೆಯಲ್ಲೇ ನನ್ನ ಕಾಲಿಗೆ ಸಾಷ್ಟಾಂಗ ಪ್ರಣಾಮ ನೀಡು ಆಜ್ಞೆಯ! ಶಿರಸಾ ವಹಿಸುವನು ಗುಲಾಮ! ಬೀರಿದರೆ ನಾನು ಒಂದೇ ಕಟಾಕ್ಷ ಸಾಹಿತ್ಯ ಸಮ್ಮೇಳನಕ್ಕೆ ನೀನೇ ಅಧ್ಯಕ್ಷ ಕವಿಗೋಷ್ಠಿಯಲ್ಲಿ ನಿನ್ನದೇ ಮೊದಲ ಕವಿತಾ ವಾಚನ ತಡೆಹಿಡಿಯಬಲ್ಲೆ ಓಡದಂತೆ ಅಧ್ಯಕ್ಷರ ವಾಚನ್ನ! ಮುದ್ರಿಸುವೆನು ನಿನ್ನ ಕವನಸಂಗ್ರಹಗಳ ಸಂಪುಟ ಮುನ್ನುಡಿ, ಬೆನ್ನುಡಿ, ಬಿಡುಗಡೆಯೆಲ್ಲಾ ಚಟಪಟ ಮುಖಪುಟದಲ್ಲೇ ಬಂದೀತು ಅರೆಪುಟದ ವರದಿ ನೀನೆಂತೆಂಥಾ ದೊಡ್ಡ ಕಾವ್ಯಗಳ ಬರದೀ ನೋಡುತ್ತಿರು ನೀನು ಏನೇನು ಆಗುವೆ ಏನೂ ಮಾಡದೆ ಅವಾರ್ಡ್ ಪಡೆಯುತ್ತ ಸಾಗುವೆ! ಕೆಟ್ಟ ವಿಮರ್ಶಕರನ್ನು ಮಾಡುವೆನು ನಾಶ ನಿನ್ನ ಬಕ್ಕತಲೆ ಮೇಲೂ ಬೆಳೆಸುವೆನು ಕೇಶ ಅಪ್ರತಿಮ ಸುಂದರ...

ನೀಡುವಿರಿ ಶಿಕ್ಷೆ

ಇಮೇಜ್
ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್ "ಜುರ್ಮ್-ಎ-ಉಲ್ಫತ್ ಕಿ ಹಮೇಂ ಲೋಗ್ ಸಜಾ ದೇತೇ ಹೈನ್" ಎಂದು ಪ್ರಾರಂಭವಾಗುವ ಈ ಗೀತೆಯನ್ನು "ತಾಜ್ ಮಹಲ್" ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. "ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ?" ಗೀತೆಗೂ ಇದಕ್ಕೂ ಇರುವ ಸಾಮ್ಯವನ್ನು ಗಮನಿಸಬಹುದು. ನೀಡುವಿರಿ ಶಿಕ್ಷೆ ಪ್ರೇಮಾಂಕುರದ ಪಾಪಕ್ಕೆ ಗಾಳಿ ನೀಡುವಿರಿ ಮಂದಾಗ್ನಿಗೆ, ಮುನ್ನೆಚ್ಚರಿಕೆ! ಭ್ರಮಿತಮತಿಯೇ ನಾವು, ತ್ಯಜಿಸುವೆವೆ ಪರಸ್ಪರರ? ನೀಡುವೆವು ಪ್ರಾಣವನ್ನೇ ಮಾಡಿದ ವಾಗ್ದಾನಕ್ಕೆ ಹೃದಯಗಳ ತೂಗುವಿರಾ ಸ್ವರ್ಣದ ತಕ್ಕಡಿಯಲ್ಲಿ! ನಾವು ನೀಡುವೆವು ಪ್ರತಿಪ್ರೇಮವನೇ ಪ್ರೇಮಕ್ಕೆ ಮಹಲು ಸಿಂಹಾಸನವು ಧನಕನಕಗಳೇನು ಮಹಾ! ಪ್ರೇಮಿಗಳು ಸಿದ್ದ ದಿವ್ಯಾಮೃತದ ತ್ಯಾಗಕ್ಕೆ! ಬೆಸೆದುಕೊಂಡಿವೆ ಹೃದಯ, ಒಂದು ನಮ್ಮ ಪ್ರಾಣಗಳು ಸಿದ್ದರಾಗಿಹೆವು, ಶಿಕ್ಷೆ ನೀಡಿರಿ ಮನಸೋ ಇಚ್ಛೆ ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್

ನೋವಿನಲ್ಲಿ ಅರಳಿ ತೋರಿಸು ನೋಡೋಣ

ಇಮೇಜ್

ಧೂಮದಲ್ಲಿ ಮಾಯ

ಇಮೇಜ್

ದೂರದಲಿ ನಿಂತು ಮಾತನಾದದಿರು

ಇಮೇಜ್
ಮೂಲ... ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿ. ಪಿ. ರವಿಕುಮಾರ್ (ದೂರ್ ರೆಹ್ ಕರ್ ನ ಕರೋ ಬಾತ್ ... ಎಂಬ ಈ ಚಿತ್ರಗೀತೆಯನ್ನು ನೀವೂ ಕೇಳಬಹುದು . ಪ್ರೇಮಿಯೊಬ್ಬ ತನ್ನ ಪ್ರೇಮಿಕೆ ಯನ್ನು ಒಲಿಸಿಕೊಳ್ಳುವ ಸನ್ನಿವೇಶಕ್ಕಾಗಿ ಸಾಹಿರ್ ಎಷ್ಟು ಮಾದಕವಾದ ಗೀತೆಯನ್ನು ರಚಿಸಿದ್ದಾರೆ!) ದೂರದಲಿ ನಿಂತು ಮಾತನಾಡದಿರು, ಬಾ ಬಳಿಗೆ ಅವಿಸ್ಮರಣೀಯವಿಗೋ ರಾತ್ರಿ ಇದು, ಬಾ ಬಳಿಗೆ! ನಿನ್ನ ಸ್ಪರ್ಶಕೆ ಕಾದು ಕಳೆದಿರುವೆನು ನಾನೊಂದು ಯುಗ ಇನ್ನು ಕೇಳದು ನನ್ನ ಮಾತನು ಮನ, ಬಾ ಬಳಿಗೆ! ಬೀಸುತಿಹ ಚಳಿಗಾಳಿಗೆ ಭುಗಿಲೇಳುವ ಆಸೆಗಳು ಕೊಂದು ತೀರುವುದು ಮಳೆ ಸಿಂಚನವಿದು, ಬಾ ಬಳಿಗೆ! ಹೀಗೆ ನನ್ನೊಳು ಏಕೆ ನಾಚಿಕೆ, ಸಂಕೋಚಗಳು? ಬಾಳಸಂಗಾತಿಗಳು ನಾವು, ಇಗೋ, ಬಾ ಬಳಿಗೆ!

ಸಂಜೆ ಮನೆಮಾಡುತಿದೆ

ಇಮೇಜ್
ಮೂಲ ... ಸಾಹಿ‌ ಲುಧಿಯಾನವಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಪರ್ಬತೋಂಕೆ ಪೇಡೋoಪರ್ ... ಎಂಬ ಈ ಗೀತೆಯನ್ನು ಸುಮನ್ ಕಲ್ಯಾಣ್ ಪುರ್ ಮತ್ತು ಮೊಹಮದ್ ರಫಿ ಅವರ ಕಂಠದಲ್ಲಿ ನೀವೂ ಕೇಳಬಹುದು .) ಸಂಜೆ ಮನೆಮಾಡುತಿದೆ ಪರ್ವತದ ಮರಗಳಲಿ ಕೆಂಪು ಸಂಜೆಯ ಬೆಳಕು, ನೀಲನೇರಳೆ ಇರುಳು ಹೃದಯಗಳೆರಡು ಕ್ಷಣ ಒಂದಾಗುವ ಘಳಿಗೆ ಬಣ್ಣದೋಕುಳಿಯಲ್ಲಿ ಮೀಯಿಸುತಿದೆ ಮುಗಿಲು ನಿಂತ ನೀರೊಳು ಗೀತೆ ಸರಸರ ಹರಿಯುತ್ತಿದೆ ಮಂಜಿನೊಂದಿಗೆ ಗಂಧ ಬೆರೆಸುವ ತಂಬೆಲರು ಬನ್ನಿ ಒಂದಾಗುವ ಈ ಚಿತ್ರಮಯ ಸಂಜೆಯೊಳು ಮುನ್ನಡಿಯ ಬರೆಯುತ್ತಿದೆ ಮುಂಬೆಳಗಿಗೆ ಇರುಳು

ಹೇಳು ಏನಾಯ್ತು ಮುಗ್ಧ ಮಾನಸವೇ

ಇಮೇಜ್
(ಮಿರ್ಜಾ ಗಾಲಿಬ್ ಅವರ 'ದಿಲ್ ಏ ನಾದಾನ್ ತುಝೇ ಹುವಾ ಕ್ಯಾ ಹೈ' ಎಂಬುದು ಚಿತ್ರಗೀತೆಯಾಗಿ ಬಹಳ ಪ್ರಸಿದ್ಧ. ಇದನ್ನು ಸುರೈಯ್ಯಾ ಮತ್ತು ತಲತ್ ಮಹಮೂದ್ ಅವರ ಮಧುರಕಂಠದಲ್ಲಿ ನೀವೂ ಕೇಳಬಹುದು . ಈ ಹಾಡಿನಲ್ಲಿ ಮಿರ್ಜಾ ಗಾಲಿಬ್ ಅವರ ತುಂಟತನವನ್ನು ಕಾಣಬಹುದು. ಒಬ್ಬ ಪ್ರೇಮಿ ತನ್ನ ಪ್ರೇಮಿಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆಕೆಗೆ ಕೋಪ ಬಂದಿರಬಹುದು. ಅವಳನ್ನು ರಮಿಸಲು ಪ್ರೇಮಿ ಪರಿಪರಿಯಾಗಿ ಪ್ರಯತ್ನಿಸುತ್ತಾನೆ. "ನಿನ್ನ ಹೊರತು ಬೇರಾರೂ ಇಲ್ಲ" ಎಂದು ಆಣೆ ಹಾಕುತ್ತಾನೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾನೆ. ಪ್ರೇಮವೇ ಅರಿಯದ ನಿನ್ನಂಥವಳನ್ನು ನಾನು ಪ್ರೇಮಿಸಲು ಹಾತೊರೆಯುತ್ತಿರುವೆನಲ್ಲ ಎಂದು ಹಲುಬುತ್ತಾನೆ. "ಒಳ್ಳೆಯದು ಮಾಡಿದರೆ ಒಳಿತೇ ಆಗುತ್ತದೆ" ಎಂದು ದೊಡ್ಡ ಮಾತಾಡುತ್ತಾನೆ. ನನ್ನನ್ನು ಪ್ರೀತಿಸಿದರೆ ಅದರಿಂದ ಒಳಿತೇ ಆಗುತ್ತದೆ ಎಂಬುದು ಅವನ ಮಾತಿನ ಅರ್ಥ. ಕೊನೆಗೆ "ನೋಡು, ನನಗೆ ಯಾವ ಬೆಲೆಯೂ ಇಲ್ಲ ಅಲ್ಲವೇ? ಆದರೂ ಫ್ರೀ ಸಿಕ್ಕಾಗ ಯಾಕೆ ಬಿಡಬೇಕು?" ಎಂಬ ಸವಾಲು ಹಾಕುತ್ತಾನೆ!) ಹೇಳು ಏನಾಯ್ತು ಮುಗ್ಧಮಾನಸವೇ ಹೇಳು ಮದ್ದೇನು ಮನದ ಕಾಯಿಲೆಗೆ ಕಡೆಗಣ್ಣೇಕೆ ಪ್ರೇಮಯಾಚನೆಗೆ ದೈವವೇ ಹೇಳು ಹೀಗೆ ಏತಕ್ಕೆ ನನ್ನ ಬಾಯಲ್ಲೂ ಉಂಟು ನಾಲಗೆಯು ಕೇಳಲೇ ಬಾರದೇನು ನನ್ನರಿಕೆ ಇಲ್ಲ ಬೇರಾರೂ ಹೊರತು ನಿನ್ನನ್ನು ವ್ಯರ್ಥ ಸಂಘರ್ಷ ಆದರೂ ...

ಬಾ ಹೆಜ್ಜೆಯ ಹಾಕು ನನ್ನೊಡನೆ

ಇಮೇಜ್
ಮೂಲ ... ನಕ್ಷ ಲ್ಯಾಲ್ ಪುರಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಬಾ ಹೆಜ್ಜೆಯ ಹಾಕು ನನ್ನೊಡನೆ, ನಾ ಹೇಳುವೆ ಹೃದಯದ ಒಳಗುಟ್ಟು ಕಣ್ಟನೋಟದ ಭಾಷೆ ಸೋತಾಗ ಹೇಳುವೆ ಮಾತನ್ನು ಬಾಯ್ದಿಟ್ಟು ತುಟಿಗಳ ಮೇಲೆ ಹೂವಿನ ಹಾಗೆ ಮಂದಸ್ಮಿತವೊಂದು ಬಿರಿದಾಗ. ಮೆಲ್ಲನೆ ನಿನ್ನ ಕಿವಿಗಳ ಒಳಗೆ ನಾನುಸಿರುವೆನೊಂದು ಅಣಿಮುತ್ತು ಪ್ರೇಮನಿವೇದನೆಯನು ನೀನರಿಯೆ, ನೀನರಿಯೆ ಪ್ರೇಮನಿರಾಕರಣ ಬೇರಾವದೋ ಕವಿಯ ಹೆಸರಿನಲ್ಲಿ ನಾನಾಡುವೆ ಎದೆಯೊಳಗೇನಿತ್ತು ತುಂಬಾ ನಿಷ್ಕರುಣಿ ಹವಾಮಾನ, ಬಿರುಗಾಳಿಯನ್ನೆಬ್ಬಿಸುವುದು ಸಹಜ, ಹೆಸರಿಡುವರು ಅರಿಯದ ಜನರಿದಕೆ "ಏರುವ ಯೌವ್ವನದ ತಾಕತ್ತು "