ಬಾ ಹೆಜ್ಜೆಯ ಹಾಕು ನನ್ನೊಡನೆ
ಮೂಲ ... ನಕ್ಷ ಲ್ಯಾಲ್ ಪುರಿ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್

ಬಾ ಹೆಜ್ಜೆಯ ಹಾಕು ನನ್ನೊಡನೆ, ನಾ ಹೇಳುವೆ ಹೃದಯದ ಒಳಗುಟ್ಟು
ಕಣ್ಟನೋಟದ ಭಾಷೆ ಸೋತಾಗ ಹೇಳುವೆ ಮಾತನ್ನು ಬಾಯ್ದಿಟ್ಟು
ತುಟಿಗಳ ಮೇಲೆ ಹೂವಿನ ಹಾಗೆ ಮಂದಸ್ಮಿತವೊಂದು ಬಿರಿದಾಗ.
ಮೆಲ್ಲನೆ ನಿನ್ನ ಕಿವಿಗಳ ಒಳಗೆ ನಾನುಸಿರುವೆನೊಂದು ಅಣಿಮುತ್ತು
ಪ್ರೇಮನಿವೇದನೆಯನು ನೀನರಿಯೆ, ನೀನರಿಯೆ ಪ್ರೇಮನಿರಾಕರಣ
ಬೇರಾವದೋ ಕವಿಯ ಹೆಸರಿನಲ್ಲಿ ನಾನಾಡುವೆ ಎದೆಯೊಳಗೇನಿತ್ತು
ತುಂಬಾ ನಿಷ್ಕರುಣಿ ಹವಾಮಾನ, ಬಿರುಗಾಳಿಯನ್ನೆಬ್ಬಿಸುವುದು ಸಹಜ,
ಹೆಸರಿಡುವರು ಅರಿಯದ ಜನರಿದಕೆ "ಏರುವ ಯೌವ್ವನದ ತಾಕತ್ತು "
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ