ಭರವಸೆ

Image result for kim jong

ಕಿಂ ಜಾಂಗ್ ಕಳಿಸಿದ್ದಾರೆ ನವ ವರ್ಷ ಸಂದೇಶ
ಯಾವಾಗ ಬೇಕೋ ನೀಡಬಹುದಂತೆ ಆದೇಶ

ಧರಿಸಿಸುವಂತೆ ನಾವು ಮೈಮೇಲೆ ವಸ್ತ್ರ
ಧರಿಸುತ್ತಾರೆ ಈತ ಮೈಮೇಲೆ ಅಣ್ವಸ್ತ್ರ

ನಮ್ಮ ಮೇಲುವಸ್ತ್ರಕ್ಕೆ ಗುಂಡಿ ಹೊಲೆದಂತೆ 
ಇವರ ವಸ್ತ್ರಕ್ಕೆ ಅಣ್ವಸ್ತ್ರದ ಗುಂಡಿ ಇದೆಯಂತೆ 

ಇಷ್ಟವಾದಾಗ ಒತ್ತಿಬಿಡಬಹುದು ಬಟನ್ನು
ಎಬ್ಬಿಸಲು ಬಾನೆತ್ತರ ಕ್ಯಾಂಡಿಕಾಟನ್ನು

ಅಣಬೆಯಾಕಾರದಲ್ಲಿ ಹೊಗೆಯು ಮೇಲೆದ್ದು
ಒದ್ದಾಡುವ ಜೀವಗಳಿಗೆ ಸಿಕ್ಕೀತು ಮದ್ದು

ಹೊಸವರ್ಷಕ್ಕೆ ಕಿಂ ಜಾಂಗ್ ನೀಡಿದ್ದಾರೆ ಭರವಸೆ
ಅಮೇರಿಕಾ ಜೊತೆಗೆ  ಮುಂದುವರೆಯಲಿದೆ ವಾಗ್ವರಸೆ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)