ಕಾಲ
ಮೂಲ ಹಿಂದಿ - ನಂದ್ ಸಾರಸ್ವತ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಕಾಲದೆದುರು ನಿಂತವರು ಯಾರು ಹೇಳಕ್ಕಾ
ಕಾಲ ಗತಿ ಬದಲಿಸಿದರೆ ದುಮ್ಮಾನದುಃಖ
ಸೀತೆಗೂ ಬರಿಗಾಲಿನಲ್ಲಿ ಅಲೆಯುವ ಆಯಾಸ
ಪಟ್ಟ ಏರುವ ಕಾಲಕ್ಕೆ ರಾಮನಿಗೆ ವನವಾಸ
ಕಾಲ ಬಯಸುವ ಮುನ್ನ ಸಿಕ್ಕದು ಕಿರೀಟ
ಕಾಲ ಬಯಸಿದರೆ ಗದ್ದುಗೆ, ರಾಜಪೀಠ
ಯಾರಿಗೆ ಸಂದಿದೆ ವಿಜಯ ಕಾಲ ಆಗಮಿಸುವ ಮುನ್ನ?
ಕಾಲ ಬರುವ ಮುನ್ನವೇ ಯಾರು ಪಡೆದರು ಸಾವನ್ನ?
ಬಡವನೂ ಬಲ್ಲಿದನೂ ಕೊನೆಗೆ ಕಾಲಕ್ಕೆ ಶರಣ
ವಿಶ್ವಪಿತನಿಗೂ ಕಾರಾಗೃಹದಲ್ಲಿ ಜನನ
ಬದಲಿಸುತ್ತದೆ ಕಾಲ ಎಲ್ಲರ ಭಾಗ್ಯರೇಖೆ
ಕಾಲ ಕಣ್ತೆರೆದಾಗ ಸಂತೋಷದ ಕೇಕೆ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಕಾಲದೆದುರು ನಿಂತವರು ಯಾರು ಹೇಳಕ್ಕಾ
ಕಾಲ ಗತಿ ಬದಲಿಸಿದರೆ ದುಮ್ಮಾನದುಃಖ
ಸೀತೆಗೂ ಬರಿಗಾಲಿನಲ್ಲಿ ಅಲೆಯುವ ಆಯಾಸ
ಪಟ್ಟ ಏರುವ ಕಾಲಕ್ಕೆ ರಾಮನಿಗೆ ವನವಾಸ
ಕಾಲ ಬಯಸುವ ಮುನ್ನ ಸಿಕ್ಕದು ಕಿರೀಟ
ಕಾಲ ಬಯಸಿದರೆ ಗದ್ದುಗೆ, ರಾಜಪೀಠ
ಯಾರಿಗೆ ಸಂದಿದೆ ವಿಜಯ ಕಾಲ ಆಗಮಿಸುವ ಮುನ್ನ?
ಕಾಲ ಬರುವ ಮುನ್ನವೇ ಯಾರು ಪಡೆದರು ಸಾವನ್ನ?
ಬಡವನೂ ಬಲ್ಲಿದನೂ ಕೊನೆಗೆ ಕಾಲಕ್ಕೆ ಶರಣ
ವಿಶ್ವಪಿತನಿಗೂ ಕಾರಾಗೃಹದಲ್ಲಿ ಜನನ
ಬದಲಿಸುತ್ತದೆ ಕಾಲ ಎಲ್ಲರ ಭಾಗ್ಯರೇಖೆ
ಕಾಲ ಕಣ್ತೆರೆದಾಗ ಸಂತೋಷದ ಕೇಕೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ