ಚಂಚಲ ಮನಸ್ಸು


ಮೂಲ ಹಿಂದಿ ... ನರೇಂದ್ರ ಶರ್ಮಾ
ಕನ್ನಡಕ್ಕೆ ... ಸಿ.ಪಿ. ರವಿಕುಮಾರ್
Brown Monkey

ಈ ನನ್ನ ಮನಸ್ಸು ಅದೆಷ್ಟು ಚಂಚಲ,
ಕ್ಷಣದಲ್ಲಿ ಅರಳಿ, ಕ್ಷಣದಲ್ಲಿ ಮುದುಡುವುದು,
ಸುಖ ಬಂದಾಗ ಹಿಗ್ಗಲೂ ತಡವಿಲ್ಲ,
ದುಃಖವಾದಾಗ ಕುಗ್ಗಲೂ ತಡವಿಲ್ಲ,
ಪಾರಿಜಾತದ ಕುಸುಮದಂತೆ ನಗುನಗುತಿದ್ದು
ಒಮ್ಮೆಲೇ ಬಾಡಿಹೋಗುವುದು ಮರುಕ್ಷಣ!

ಹಿಗ್ಗಿದಾಗ "ಇಡೀ ಜಗತ್ತು ನನ್ನದು!"
ಎಂದು ಬೀರುವುದು ಮುಗುಳ್ನಗೆ.
ಕುಗ್ಗಿದಾಗ ಅತ್ತು ಕರೆದು
"ಜಗದ ಸಹವಾಸವೇ ಬೇಡ ನನಗೆ!"

ನಿಜವೆಂದರೆ ಮನದ ದುರ್ಬಲತೆಯ ಮೂಲ
ಅಹಂಕಾರವಷ್ಟೇ, ಬೇರೇನಲ್ಲ!
ಬುದ್ದಿ ಹೇಳಿದೆ ಎಷ್ಟೋ ಮನಸ್ಸಿಗೆ,
ನನ್ನ ಹಿತವಚನಕ್ಕೆ ಸಿಕ್ಕಿದ್ದು ಉಪೇಕ್ಷೆ!

ಮಣ್ಣಿನಿಂದ ಬಂದದ್ದು ಈ ಮನಸ್ಸು
ಮತ್ತೆ ಮರಳುವುದು ಮಣ್ಣಿನ ಆಟಕ್ಕೆ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)