ಇಂದು ಹೋಗದಿರು, ತೊರೆದು
ಮೂಲ ಗಜಲ್: ಆಜ್ ಜಾನೇ ಕೀ ಜಿದ್ ನಾ ಕರೋ
ರಚನೆ - ಫಯ್ಯಾಡ್ ಹಾಶ್ಮಿ
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್

(ಈ ಪ್ರಸಿದ್ಧ ರಚನೆಯನ್ನು ಹಲವು ಕಲಾವಿದರು ಹಾಡಿದ್ದಾರೆ (ಉದಾಹರಣೆಗೆ ಈ ಲಿಂಕ್ ನೋಡಿ)
ಇಂದು ಹೋಗದಿರು, ತೊರೆದು, ಹೀಗೇ ಪಕ್ಕದಲ್ಲೇ ಕುಳಿತಿರು
ಮುನಿಸಿಕೊಳ್ಳದಿರು, ಉರಿದು ಬೀಳದಿರು, ನನ್ನ ಮಾತಲ್ಲಿ ಕೊಲ್ಲದಿರು
ಇಂದು ಹೋಗದಿರು, ತೊರೆದು
ಕೇಳಿಕೋ ನಿನ್ನನೇ, ತಡೆಯುತಿರುವೆನು ಏಕೆ, ಎದ್ದು ಹೊರಟಾಗ ಬರುವುದು ಜೀವಕ್ಕೇ
ನಿನಗೆ ನನ್ನಾಣೆ, ಓ ನನ್ನ ಮನದನ್ನೆ, ಕೇಳು ನನ್ನ ಮಾತನ್ನೊಮ್ಮೆ
ಇಂದು ಹೋಗದಿರು, ತೊರೆದು
ಕಾಲದ ಬಂಧನದಲ್ಲಿದೆ ಜೀವನ, ಸಿಕ್ಕ ಒಂದೆರಡು ಮುಕ್ತ ಕ್ಷಣ
ಕಳೆದುಕೊಂಡೇತಕೆ ಕೊರಗುವೆ ದಿನ-ದಿನ?
ಇಂದು ಹೋಗದಿರು, ತೊರೆದು
ಇಂದು ಗಾಳಿಯೊಳು ತೇಲುತ್ತಿದೆ ಮುಗ್ಧತೆ, ಅರಳಿ ನಿಂತಿಹುದು ಪ್ರೇಮಲತೆ
ನಾಳೆಯನ್ನು ಯಾರು ಕಂಡವರು ಹೇಳು, ತಡೆ ರಾತ್ರಿಯು ಉರುಳದಂತೆ
ಇಂದು ಹೋಗದಿರು ತೊರೆದು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ