ಕವಿಸಮಯ (ಗಜಲ್)

ಕವಿಸಮಯ (ಗಜಲ್)

ಕವಿಗಳಿಗೆ ಇಂಥದ್ದೆಂದೊಂದು ಉಂಟೇ ಹೇಳಿ ಸಮಯ
ಸೂರ್ಯೋದಯ ಚಂದ್ರೋದಯ ಎಲ್ಲವೂ ಕವಿಸಮಯ!

ತಂದಿರಿಸಿದ್ದಾರು ಬಿಂದು ಅಮೃತವೆಂಬ ಸೋಜಿಗ ಬೆಳ್ಳಂಬೆಳಗು
ಇರುಳು ಚಂದ್ರನಲ್ಲಿ ಪೆಪ್ಪರಮಿಂಟ್ ಕಾಣಿಸುವ ಸಮಯ

ಮಟಮಟಮಧ್ಯಾಹ್ನದಲ್ಲಿ ಸಮಾಧಾನ ಹೇಳಿ ಬರಿಗೊಡಳಿಗೆ
ಸಂಜೀಯ ಜಾವಿಗೆ ಬಾವಿ ಹೊರಡುವ ಸಮಯ

ಶ್ರಾವಣ ಬಂದರೂ ಕವನ, ಕಾಜಾಣ ಕೂಗಿದರೂ ಕವನ,
ಸರ್ವಋತು ಬಂದರೂ ಬಾಗಿಲು ತೆರೆದಿಡುವ ಸಮಯ

ನವಯುಗಾದಿಗೆ ಕವನ, ರಾಮನವಮಿಗೆ ಕವನ
ದೀಪಾವಳಿಯೋ ಕವಿತೆಗಳ ಹಚ್ಚಿಡುವ ಸಮಯ

ಪ್ರೇಮದೊರತೆ ಹರಿದಾಗಲೂ ಕವಿತೆ, ಬರಿದಾದರೆ  ವಿರಹಗೀತೆ!
ಗೋಪಿ ಗ್ಯಾಂಡಲೀನಳಿಗಾಗಿ ಕನವರಿಸುವ ಸಮಯ!

ಭಾಮಿನಿಯು ಮೂರ್ನಾಲ್ಕು ಬಾರಿ ಕೂಗಿ ಕರೆದಿರಬಹುದೆ
ನಾರಣಪ್ಪನಿಗೆ ಮಿಂದುಟ್ಟ ಮಡಿ ಆರುವಷ್ಟೇ ಸಮಯ!

ಕವಿಗೋಷ್ಠಿಯಲ್ಲಿ ಕವಿತೆ ಓದುತ್ತಾ ನಿಂತಾಗ
ಹೇಗೆ ಜಾರಿತು ಹೊತ್ತು ಹೋಯಿತೆಲ್ಲಿ ಸಮಯ!

ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)