ಬಸ್ ಪ್ರಯಾಣ

ಪ್ರಯಾಣವನು ದೀರ್ಘಗೊಳಿಸಿದೆ ಟ್ರಾಫಿಕ್ಕು
ದೀರ್ಘತರಗೊಳಿಸಿದೆ ಫೇಸ್ ಬುಕ್ಕು

ಎಷ್ಟು ಓದಲು ಸಾಧ್ಯ ಪತ್ರಿಕೆಯನು ಗೆಳೆಯಾ!
ವಾರ್ತೆಗಾಗಿ ಬಿಡಿಸಬೇಕು ಅಭಿಪ್ರಾಯಗಳ ಸಿಕ್ಕು

ನೋಡೋಣವೆಂದು ತೆರೆದರೆ ಮುಖಪುಸ್ತಕ
ಎಷ್ಟು ನೋಡಲು ಸಾಧ್ಯ ಕಾಮಿಕ್ಕು ಗಿಮಿಕ್ಕು

ಬ್ಯಾನ್ ಆದರೂ ಕಾಡುವುದೊಂದು ಭಯಂಕರ ಬ್ಯಾನೆ
ಗುಡ್ ಮಾರ್ನಿಂಗ್ ಚಿತ್ರಕ್ಕೂ ಈಗ ಬಂದಿದೆ ಪ್ಲಾಸ್ಟಿಕ್ಕು

ಹತ್ತಿರದ ಹೋಟೆಲಿನ ತಿಂಡಿಗಳ ಚಿತ್ರಗಳು
ಹಸಿದು ಕುಳಿತವನನ್ನು ಕಾಡುತ್ತವೆ ಉದ್ದಕ್ಕೂ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)