ಗಾಂಧೀಸ್ತುತಿ (ಗಜಲ್)




ಅಂಚೆಚೀಟಿಯ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ
ಅಂಚಿಗೆ ನಿನ್ನನ್ನು ಮೆಲ್ಲಗೆ ತಳ್ಳಿದೆವು ಗಾಂಧಿ

ನೋಟಿನ ಮೇಲೆ ನಿನ್ನನ್ನು ಮುದ್ರಿಸಿದೆವು ಗಾಂಧಿ
ಗೀಟಿನಾಚೆಗೆ ನಿನ್ನ ನಿಲ್ಲಿಸಿದೆವು ಗಾಂಧಿ

ಮೀಮ್‌ನಲ್ಲಿ ಜೂಮ್ ಮಾಡಿ ತೋರಿದೆವು ಗಾಂಧಿ
ಜೂಮ್ ಔಟ್ ಮನದಲ್ಲಿ ಮಾಡಿದೆವು ಗಾಂಧಿ

ಸತ್ಯದೊಂದಿಗೆ ನಿನ್ನ ಪ್ರಯೋಗಗಳು ಗಾಂಧಿ
ಹತ್ಯೆಯದರದು ನಮ್ಮ ನಿತ್ಯಚರಿ ಗಾಂಧಿ

ತಂದೆ ತಾತ ಎಂದೆಲ್ಲ ಮೆರೆಸುವುವು ಗಾಂಧಿ
ಒಂದು ದಿನ ವರ್ಷಕ್ಕೆ ನೆನೆಯುವೆವು ಗಾಂಧಿ

ರಜೆಯಿಲ್ಲದಿದ್ದರೆ ನಿನ್ನ ಜನ್ಮದಿವಸಕ್ಕೆ ಗಾಂಧಿ
ನಜರಿನಲ್ಲಿ ನೀನು ಇರಲಾರೆ ಗಾಂಧಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)