ಅಯೋಧ್ಯೆ

ಸಿ.ಪಿ. ರವಿಕುಮಾರ್

ಮುಗಿಸಿ ಊಟ ಹೊರಬಂದರೆ ಅವರಿಬ್ಬರೂ
ಒಂಬತ್ತು ಎಂದು ಊಹಿಸಬಹುದು ವೇಳೆಯ
ಜಗುಲಿಯ ಮೇಲೆ ಮಣೆ ಹಾಸಿ ಕುಳಿತು
ಜಗಿಯುತ್ತಾರೆ ಮಡದಿ ಮಡಿಸಿಕೊಟ್ಟ ವೀಳೆಯ
ಜಗಳವಾಡುತ್ತಾರೆ ಏನಾದರೂ ತೆಗೆದು
ಸಗಣಿ ಎರಚುತ್ತಾರೆ ಪರಸ್ಪರರ ಮೇಲೆ

ಸಿಗದು ಈ ದೇಶದಲ್ಲಿ ನ್ಯಾಯವೆಂದು
ಉಗಿಯುತ್ತಾನೆ ಎಡಗಡೆಗೆ ಕುಳಿತವನು
ನಗುತ್ತಾ ಬಲಗಡೆಗೆ ಕುಳಿತವನ ಉತ್ತರ
ಮಗ್ಗುಲಿನ ದೇಶಕ್ಕೇಕೆ ಹೋಗಬಾರದು ಬಂಧು!

"ಭಗ್ನಗೊಳಿಸಿದವರಿಗೆ ಬೇಡವೇ ಯಾವುದೇ ಶಿಕ್ಷ!"
"ಭಗ್ನಗೊಳಿಸಿದ್ದು ಯಾರು ಹಂಪೆಯ ವಿರೂಪಾಕ್ಷ!
ಹೀಗೆ ವಾದಕ್ಕೆ ಪ್ರತಿವಾದ, ಉತ್ತರಕ್ಕೆ ಕಾಯದೆ
ಯುಗಯುಗಾದಿ ಕಳೆದರೂ ಮುಗಿಯದ ತಗಾದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)