ಶಿಲಾಶಾಸನ

ಸಿ.ಪಿ. ರವಿಕುಮಾರ್

ಕೋಟೆಯ ಕಲ್ಲಿನ ಮೇಲೆ ಜನ
ಕೆತ್ತಿದ್ದಾರೆ ತಮ್ಮ ಹೆಸರು
ಬಾಲು ಪ್ಲಸ್  ಸಪ್ನಾ,
ಹೃದಯ ಭೇದಿಸುವ ಬಾಣ.
ಛೇ ಎಂಥಾ ಜನ!
ಹಾಳು ಮಾಡಲೇ ಲಾಯಕ್ಕು
ಎಂದು ಬೈದುಕೊಂಡೇ ಒಳಗೆ ಹೋದೆ.

ಕೋಟೆಯ ಒಳಗೆ ಕಂಡವು ಭವ್ಯ ಕೆತ್ತನೆಗಳು,
ಶಿಲಾಶಾಸನಗಳು, ಪುರಾತತ್ತ್ವ ಇಲಾಖೆಯ ಬೋರ್ಡು
ಶಿಲಾಶಾಸನದ ಇತಿಹಾಸ:
ಇಂಥವನೊಬ್ಬ ರಾಜ
ಇಂಥವನೊಬ್ಬ ರಾಜನನ್ನು
ಇಂಥ ಇಸವಿಯಲ್ಲಿ
ಇಂಥ ಕಡೆ ನಡೆದ ಯುದ್ಧದಲ್ಲಿ ಸೋಲಿಸಿದಾಗ
ಇಷ್ಟು ಜನ ಕೊಟ್ಟರು
ತಮ್ಮ ಪ್ರಾಣ ಬಲಿದಾನ
ಆಗ ಕಟ್ಟಿಸಿ ದೊಡ್ಡ ದೇವಸ್ಥಾನ
ರಾಜ ಕೆತ್ತಿಸಿದ ಶಿಲಾಶಾಸನ.

ಇದಕ್ಕಿಂತ ಬಾಲು ಸಪ್ನಾಗೆ
ಕೊಟ್ಟ ಪ್ರೇಮದ ಬಲಿದಾನವೇ ಹೆಚ್ಚಲ್ಲವೇ
ಎಂದು ಯಾರೋ ಕೇಳಿದರು ಮೆಲ್ಲನೆ.
ಸುಮ್ಮನಿರಿ, ಇದು ನಮ್ಮ ಪುರಾತನ ಇತಿಹಾಸ!
ಇವನು ದೊಡ್ಡ ರಾಜ, ಸಾಧಾರಣನಲ್ಲ!
ಪ್ರೇಮಿಸುವುದೇನು ಮಹಾ ಸಾಧನೆ,
ಅದಕ್ಕೇಕೆ ಶಿಲಾಶಾಸನ?
ಇಷ್ಟಾಗಿ ಯಾರಿವರು ಯಃಕಶ್ಚಿತ್ ಜನ!
ಎಂದು ಸುಮ್ಮನಾಗಿಸಿದೆ.
ಅವರು ಮೌನವಾಗಿದ್ದು ಕಂಡು
ಒಳಗೇ ಗೆದ್ದೆನೆಂದು ಬೀಗಿದೆ.

ಅಲ್ಲೊಬ್ಬ ಫಾರಿನರ್ ಸಿಕ್ಕಿದಾಗ
ಕೇಳಿ ಅವರ ಪಕ್ಕ ನಿಂತು
ತೆಗೆದುಕೊಂಡೆ ಸೆಲ್ಫೀ ನಗುತ್ತಾ.
"ಸರ್, ನಮ್ಮದು ವಿಶ್ವದಲ್ಲೇ
ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಗೊತ್ತಾ?"
ಕೋಟೆಯ ಕಲ್ಲಿನ ಮೇಲೆ ಜನ
ಕೆತ್ತಿದ್ದಾರೆ ತಮ್ಮ ಹೆಸರು
ಬಾಲು ಪ್ಲಸ್  ಸಪ್ನಾ,
ಹೃದಯ ಮತ್ತು ಬಾಣ,
ಲವ್‌ಲವಿಕೆಯ ಕಥನ.

ಛೇ ಎಂಥಾ ಜನ!
ಹಾಳು ಮಾಡಲೇ ಲಾಯಕ್ಕು
ಎಂದು ಬೈದುಕೊಂಡೇ ಒಳಗೆ ಹೋದೆ.

ಕೋಟೆಯ ಒಳಗೆ ಕಂಡವು ಭವ್ಯ ಕೆತ್ತನೆಗಳು,
ಶಿಲಾಶಾಸನಗಳು, ಪುರಾತತ್ತ್ವ ಇಲಾಖೆಯ ಬೋರ್ಡು
ಶಿಲಾಶಾಸನದ ಇತಿಹಾಸ:
ಇಂಥವನೊಬ್ಬ ರಾಜ
ಇಂಥವನೊಬ್ಬ ರಾಜನನ್ನು
ಇಂಥ ಇಸವಿಯಲ್ಲಿ
ಇಂಥ ಕಡೆ ನಡೆದ ಯುದ್ಧದಲ್ಲಿ ಸೋಲಿಸಿದಾಗ
ಇಷ್ಟು ಜನ ಕೊಟ್ಟರು
ತಮ್ಮ ಪ್ರಾಣ ಬಲಿದಾನ
ಆಗ ಕಟ್ಟಿಸಿ ದೊಡ್ಡ ದೇವಸ್ಥಾನ
ರಾಜ ಕೆತ್ತಿಸಿದ ಶಿಲಾಶಾಸನ.

ಇದಕ್ಕಿಂತ ಬಾಲು ಸಪ್ನಾಗೆ
ಕೊಟ್ಟ ಪ್ರೇಮದ ಬಲಿದಾನವೇ ಹೆಚ್ಚಲ್ಲವೇ
ಎಂದು ಯಾರೋ ಕೇಳಿದರು ಮೆಲ್ಲನೆ.
ಸುಮ್ಮನಿರಿ, ಇದು ನಮ್ಮ ಪುರಾತನ ಇತಿಹಾಸ!
ಇವನು ದೊಡ್ಡ ರಾಜ, ಸಾಧಾರಣನಲ್ಲ!
ಪ್ರೇಮಿಸುವುದೇನು ಮಹಾ ಸಾಧನೆ,
ಅದಕ್ಕೇಕೆ ಶಿಲಾಶಾಸನ?
ಇಷ್ಟಾಗಿ ಯಾರಿವರು ಯಃಕಶ್ಚಿತ್ ಜನ!
ಎಂದು ಸುಮ್ಮನಾಗಿಸಿದೆ.
ಅವರು ಮೌನವಾಗಿದ್ದು ಕಂಡು
ಒಳಗೇ ಗೆದ್ದೆನೆಂದು ಬೀಗಿದೆ.

ಅಲ್ಲೊಬ್ಬ ಫಾರಿನರ್ ಸಿಕ್ಕಿದಾಗ
ಕೇಳಿ ಅವರ ಪಕ್ಕ ನಿಂತು
ತೆಗೆದುಕೊಂಡೆ ಸೆಲ್ಫೀ ನಗುತ್ತಾ.
"ಸರ್, ನಮ್ಮದು ವಿಶ್ವದಲ್ಲೇ
ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಗೊತ್ತಾ?"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)