ಓ ಫೇಸ್ ಬುಕ್

ಓ ಫೇಸ್ಬುಕ್, ನೀನು ಸರಸ್ವತಿಯ ಆಪ್.ಅವತಾರ
ಮರುವರ್ಷ ನಿನಗೇ ಪೂಜೆ ಪುನಸ್ಕಾರ

ಕೊಡಮ್ಮ ಬುದ್ಧಿ ಎಂದರೂ ಕೊಡಲಿಲ್ಲ ಶಾರದೆ
ನಿನ್ನನ್ನು ನೋಡಾದರೂ ಕಲಿಯಬಾರದೇ

ದಿನನಿತ್ಯವೂ ಸುದ್ದಿ ನವನವೋನ್ಮೇಷ
ಕಲಿಗಳಿಗೂ ನಿನ್ನಿಂದ ಕಲಿಯುವಾವೇಶ

ಹಿಸ್ಟರಿ, ಮೆಡಿಸಿನ್, ಎಕನಾಮಿಕ್ಸ್ ಎಲ್ಲಾ
ನಿನ್ನಿಂದಲೇ ಕಲಿತುಬಿಟ್ಟಿರುವೆವಲ್ಲ!

ಜಾಣಜಾಣೆಯರ ಪತ್ರಿಕೆ ತಂದ ಲಂಕೇಶ
ನಿನ್ನ ಜಾಣ್ಮೆಯ ಮುಂದೆ ನೋಡುತಿದ್ರು ಆಕಾಶ

ಈ ಈಕ್ವಲ್ಸ್ ಎಂಸೀಸ್ಕ್ವೇರ್ ಬರಿಯ ಸುಳ್ಳಂತೆ
ಭೂಮಿ ಗೋಲಾಕಾರವೆಂಬಷ್ಟೇ ಬರಿ ಅಂತೆಕಂತೆ

ನಿನ್ನಿಂದ ಬೆಳಕಾಗಿದೆ ಓ ಜ್ಞಾನದೀಪ್ತಿ!
ನಿನ್ನಿಂದಲೇ ತಮಾಂಧಕಾರಕ್ಕೆ ಸಮಾಪ್ತಿ!

ಹಳೆಯದೆಲ್ಲ ಸುಳ್ಳು ಎಂದು ಹೇಳಿಕೊಟ್ಟಿರುವೆ ಮಾತೆ
ತೆರೆದಿರುವೆ ನಮ್ಮ ಬುದ್ಧಿಯೊಳಗೆ ಹೊಸ ಖಾತೆ

ಓ ಫೇಸ್ಬುಕ್, ನೀನು ಸರಸ್ವತಿಯ ಜ್ಞಾನಭಂಡಾರ
ಮರುವರ್ಷ ನಿನಗೇ ಪೂಜೆ ಪುನಸ್ಕಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)