ಜೀವನಚಕ್ರ

ಬಂದು ಸೇರಿದಾಗಿನಿಂದಲೂ ಈ ಗ್ರಹವನ್ನು
ಪಿಳಪಿಳನೆ ಮೊದಲಸಲ ಮೀಟಿದಾಗಿನಿಂದ  ಕಣ್ಣು
ಎಷ್ಟೊಂದಿದೆ ನೋಡಲು, ನೋಡಿದಷ್ಟೂ ತೀರದು
ಎಷ್ಟೊಂದಿದೆ ಮಾಡಲು, ಮಾಡಿ ಮುಗಿಸಲಾಗದು

ಸಿಕ್ಕುತ್ತಲೇ ಇರುವುದಿಲ್ಲಿ ಸ್ವೀಕರಿಸಿದಷ್ಟೂ
ದೊರೆಯುವುದು ಇಲ್ಲಿ ಹುಡುಕಿದಷ್ಟೂ
ಅಲ್ಲಿ ಮೇಲೆ ಆಗಸದೊಳು ನೀಲ
ಉರುಳುತ ಸಾಗುವ ಬೆಳಕಿನ ಗೋಲ
ಹಿರಿಯ ಕಿರಿಯ ಎನ್ನದೆ ಎಲ್ಲರನೂ
ಸುತ್ತಿಸುತಿದೆ ನಿಲ್ಲದ ಚಕ್ರದೊಳು ಸುತ್ತು

ಇದು ಜೀವನ ಚಕ್ರ
ನೂಕುವುದಿದು ನಮ್ಮೆಲ್ಲರನೂ
ಹತಾಶೆ ಭರವಸೆಗಳ ಮೂಲಕ
ಪ್ರೀತಿವಿಶ್ವಾಸಗಳ ಮೂಲಕ
ತೆರೆದುಕೊಳ್ಳುವ ಹಾದಿಯಲ್ಲಿ
ನಮ್ಮ ಸ್ಥಾನ ನಾವು ಕಂಡುಕೊಳ್ಳುವ ತನಕ
ಈ ಜೀವನ ಚಕ್ರದಲ್ಲಿ.
ಇದುವೇ ಜೀವನ ಚಕ್ರ

ಮೂಲ: ಕಾರ್ಮೆನ್ ಟ್ವಿಲೀ
(ದ ಲಯನ್ ಕಿಂಗ್)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)