ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ

Landscape Photography of Cars

ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ
ನಮ್ಮ ಬೆಂಗಳೂರು ಈಗ ಅಪರಾಧ ನಗರಿ

ಇತ್ತು ನಿವೃತ್ತರ ಸ್ವರ್ಗವೆಂಬ ಬಿರುದು ಹಿಂದೊಮ್ಮೆ
ರಸ್ತೆ ದಾಟುವ ನಿವೃತ್ತರಿಗೆ ಸ್ವರ್ಗ ಕಾಣಿಸುವ ನಗರಿ

ಬೆಂದಕಾಳೂರೆಂಬ ಕಥೆ ಹೇಳುವರು ಮಂದಿ
ಯಾರ ಬೇಳೆ ಕಾಳೂ ಪೂರ್ತಿ ಬೇಯದ ನಗರಿ

ನೂರಾರು ಕೆರೆಗಳು ಇದ್ದವಂತೆ ಹಿಂದೊಮ್ಮೆ
ಎಕರೆಗಳಾಗಿ ಎಲ್ಲವನ್ನೂ ಪರಿವರ್ತಿಸಿದ ನಗರಿ

ಉಪವನಗಳ ನಗರವೆಂಬ ಅಡ್ಡ ಹೆಸರಿತ್ತು.
ಅಪವನ, ಕಲುಷಿತ ಪವನಗಳ ನಗರಿ

ಅಂದು ಸಿಲಿಕಾನ್ ಸಿಟಿ, ಐಟಿ ಬಿಟಿ ಮುನ್ನಡೆಗಳ ನಗರಿ
ಇಂದು ಕಾರ್ಬನ್ ಸಿಟಿ, ಟ್ರಾಫಿಕ್ ತಡೆಗಳ ನಗರಿ


ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)