ವಿವಾದ ಸೃಷ್ಟಿಸುವ ಕೆಲಸ

ಕೆಲವರಿಗೆ ವಿವಾದ ಸೃಷ್ಟಿಸುವ ಕೆಲಸ
ಕೆಲಸವಿಲ್ಲದವರಿಗೆ ಇನ್ನೇನು ಹುಟ್ಟಿಸುವ ಕೆಲಸ
ಸೋಮಾರಿ ಕಟ್ಟೆಯ ಮೇಲೆ ಹೂಡಿ ಪಟ್ಟಾಂಗ
ಅತ್ತಿತ್ತ ಎಲ್ಲಕಡೆ ದಿಟ್ಟಿಸುವ ಕೆಲಸ
ಸ್ವಂತ ಆಲೋಚನೆಯನ್ನು ಕಲಿಯಲೇ ಇಲ್ಲ
ಅಲ್ಲಿಯದನ್ನಿಲ್ಲಿ ಮುಟ್ಟಿಸುವ ಕೆಲಸ
ನೇರವಾದ ಉತ್ತರಕ್ಕೆ ಬೆಲೆಯಿಲ್ಲವೆಂದು
ಕಂಬದಿಂದ ಕಂಬಕ್ಕೆ ಸುತ್ತಿಸುವ ಕೆಲಸ
ಯಾರೋ ಹೇಳಿಕೊಟ್ಟರು ಒಂದು ಹಳೆಯ ರಾಗ
ಅದನ್ನೇ ಹಾರ್ಮೋನಿಯಂ ಕುಟ್ಟಿಸುವ ಕೆಲಸ
ಸಿ.ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ