ನಡೆಯಿತಂತೆ ಹೀಗೊಂದು ಮದುವೆ
ಬಿಹಾರದಲ್ಲಿ ನಡೆಯಿತಂತೆ ಹೀಗೊಂದು ಮದುವೆ
ಹೌಹಾರಿ ಹುಬ್ಬೇರಿಸಿ ತಲೆದೂಗುವ ಮದುವೆ
ಮದುವೆ ಏನೂ ಸರಳ ಸಾಮಾನ್ಯರದಲ್ಲ
ಪದವಿಯಲ್ಲಿರುವವರ ಸ್ಥಿತಿವಂತರ ಮದುವೆ
ಸಾಲು ಸಾಲಾಗಿ ಬಂದರಂತೆ ಅತಿಥಿಗಳು
ಲಾಲು ಇತ್ಯಾದಿಗಳೂ ಆಗಮಿಸಿದ ಮದುವೆ
ಮಜವೇನೆಂದು ನೀವು ಕೇಳುವುದು ಸಾಧುವೇ
ಭೋಜನಕೂಟವೇ ಆಯೋಜಿಸದ ಮದುವೆ
ಲಡು ಸಿಕ್ಕಿತು ಎಲ್ಲರಿಗೂ ಒಂದಲ್ಲ ನಾಲ್ಕು
ಬಡ್ಡಿ ಸಾಲಗಳನ್ನು ಹೊರದೂಡಿದ ಮದುವೆ
ವಧುವರರಿಗೆ ಬೇಕು ಜನರ ಆಶೀರ್ವಾದ
ಅದು ಹೀಗೂ ಸಿಕ್ಕದೇ ಎಂದು ಪ್ರಶ್ನಿಸಿದ ಮದುವೆ
ಸುದ್ದಿಯಾಗಿದೆ ಮಾರಾಟ ಸಂಸ್ಕೃತಿಯ ನಡುವೆ
ಬುದ್ಧನ ನಾಡಿನಲ್ಲೊಂದು ಬುದ್ಧಿವಂತರ ಮದುವೆ
ಸಿ.ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ