ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು

ಅಬ್ಬಾ ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು
ಇಬ್ಬನಿಯು ಮಂಜುಗಲ್ಲಾಗಿದೆ ಈ ಬೆಳಗು
ಬಿಸಿಕಾಫಿ ಚಹಾ ನೆನೆದು ಪರಿತಪಿಸುವ ಬೆಳಗು
ರಸಿಕರೂ ಬಿಸಿಗಾಗಿ ಕಾಫಿಟೀ ಹೀರುವ ಬೆಳಗು!
ಹಳೆಯ ಸಂಗ್ರಹದಿಂದ ಸೈಟರ್ ಹುಡುಕುವ ಬೆಳಗು
ಬೆಳಕಾಗದಿದ್ದರೂ ಗಡಿಯಾರ ಕೋರುತ್ತಿದೆ ಬೆಳಗು |
ಪುಟ್ಟಣ್ಣ ಕಣಗಾಲ್ ಕೊಡಗು ನೆನಪಿಸುವ ಬೆಳಗು
ಬಿತ್ತಿ ಕನಸುಗಳನ್ನು ಬೆಳಗಿಸುವ ಬೆಳಗು
ಮುಗಿಯಿತು ನವೆಂಬರ್ ರಾಜ್ಯೋತ್ಸವ ಮಾಸ
ನಗುನಗುತ ಕನ್ನಡಕ್ಕೆ ಕೈಬೀಸುವೆ ಬೆಳಗು!
ಸಿ.ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ