ರಕ್ತಸಂಬಂಧ (ಒಂದು ಗಜಲ್)

ಸುರಿದರೂ ನಾನು ನಿನ್ನ ಕಿವಿಯೊಳಗೇ ನಾದಸುಧೆ
ಸರಿ ಸರಿ ಎಂದು ಕೈ ಝಾಡಿಸುವೆ ಓ ನಿಷ್ಕರುಣಿ!
ನಿನ್ನ ಸಭೆಯೊಳಗೆ ನನಗೆ ಕೊಡದಿದ್ದರೂ ಆಹ್ವಾನ
ನನ್ನ ಅಭಿಮಾನ ಮರೆತು ಹಾಡುವೆ ನಾ ತೆರೆದು ದನಿ
ಅತಿಥಿಗಳ ಸ್ವಾಗತಕ್ಕೆ ಉರಿಸುವರು ಅಗರುಹೊಗೆ
ನಿನ್ನ ಹೊಗೆಯಿಂದೇಕೋ ಸುರಿಯುತ್ತಿದೆ ಕಣ್ಣಲ್ಲಿ ಹನಿ
ನೆತ್ತರಿನ ಬಂಧು ನಾನು, ಬೇಡೆನು ನಾ ಬೇರೇನೂ
ತಟ್ಟಿ ಕೈಯೊಳು ಹೊಸಕಿ ಹಾಕುವೆಯಾ ಹೃದಯ-ದಣಿ!
ಸಿ.ಪಿ. ರವಿಕುಮಾರ್
ಇದು ಗಜಲ್ ಅಲ್ಲ. ಬರೆದದ್ದೆಲ್ಲ ಗಜಲ್ ಆಗುವುದಿಲ್ಲ ದಯವಿಟ್ಟು ಗಮನಿಸಿ
ಪ್ರತ್ಯುತ್ತರಅಳಿಸಿ