ಪೋಸ್ಟ್‌ಗಳು

ಬ್ಯಾಗ್ ಭಾಗ್ಯ

  ಬ್ಯಾಗ್ ಭಾಗ್ಯ ಎಲ್ಲರ ಮನೆಯಲ್ಲೂ ಇರುತ್ತದೆ ಒಂದಲ್ಲ ಹತ್ತು ಬ್ಯಾಗುಗಳ ಸಂಗ್ರಹ ಬಿಚ್ಚಿ ನೋಡಿದರೆ ಬೇರೇನೂ ಇರದು ಇನ್ನಷ್ಟು ಬ್ಯಾಗುಗಳ ವಿನಃ ಕೆಲವು ಪ್ಲಾಸ್ಟಿಕ್ ಕೆಲವು ದಪ್ಪ ಕಾಗದ ಮೇಲೆ ಆಕರ್ಷಕ ಚಿತ್ರ, ಬರಹ. ಎಸೆಯಲು ಮನಸ್ಸಾಗದೆ ಎಲ್ಲವೂ ಸೇರುತ್ತವೆ ಬ್ಯಾಗುಗಳ ಸಂಗ್ರಹ. ಮಾಡಲು ಹೊರಟಾಗ ಶಾಪಿಂಗ್ ಬ್ಯಾಗ್ ಮರೆಯುತ್ತದೆ ಅಯ್ಯೋ ಹಣೆಬರಹ. ಮರಳಿ ಬಂದಾಗ ಇನ್ನಷ್ಟು ಬೆಳೆಯುತ್ತದೆ. ಬ್ಯಾಗು ಗ ಳ ಸಂ ಗ್ರಹ . C.P. Ravikumar

ಕಂಗಳಲಿ ಒಂದು ಕಥನ

ಇಮೇಜ್
ಕಂಗಳಲಿ ಒಂದು ಕಥನ ಒಂದಿಷ್ಟು ಮೋಡ ಒಂದಿಷ್ಟು ನೀರು ಮತ್ತೊಂದು ಕಥನ ನಯನದ್ವಯ ಜಲಧಾರೆಯ ಹರಿಸುತ್ತಿರುವುವು  ಕಿವಿಗೊಡುವಿರೋ ಯಾ ಇಲ್ಲವೋ ಹೇಳುತ್ತಿರುವುವು ವಹಿಸಿದರೂ ಗಹನ ಮೌನ ನಿಂತಾಗ ಕಂಬನಿಧಾರೆಯು, ಮಾತೂ ಮುಗಿವುದು ಮಾತನ್ನು ಕೇಳಿಸಿಕೊಂಡರೆ ಏನೋ ಸಿಗುವುದು ಹಳೆಯದು ಹಾಗೂ ನವೀನ ಇರುಳೊಂದು ಜಾರಿದಕೂಡಲೆ ಇರುಳೇ ಕವಿದಿದೆ ಮರೆತಿರುವ ಯಾವುದೋ ಮಾತು ನಾಲಿಗೆಯ ಮೇಲಿದೆ ನೂರೆಂಟು ನುಡಿವ ನಯನ ಮೂಲ : ಗುಲ್ಜಾರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಚಿತ್ರ: ಮಾಸೂಮ್ 

ನೂರು ವರ್ಷಗಳ ತರುವಾಯ

ಇಮೇಜ್
  ನೂರು ವರ್ಷಗಳ ತರುವಾಯ ನನ್ನ ಕವಿತೆ ಓದುತ್ತ ನಿಂತಿರುವೆ, ಯಾರು ನೀನು? ನಿನಗಾಗಿ ಈ ವಸಂತಸಂಪದದಿಂದ  ಕಳಿಸಲಾರೆ ಒಂದಾದರೂ ಹೂವನ್ನು. ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ ಕಳಿಸಲಾರೆ ಒಂದಾದರೂ ಹೊನ್ನರೇಖೆ. ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ ಕಾಣುವುದು ಮುಗುಳುಗಳ ಹೊತ್ತ ಶಾಖೆ ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ ಮಾಯವಾದ ಕುಸುಮಗಳ ಗಂಧ: ಪ್ರಫುಲ್ಲ ಮನದ ಉದ್ಯಾನದಲ್ಲಿ ಕೇಳಲಿ ನೂರು ವರ್ಷಗಳ ಹಿಂದೆ ಜೀವನಾನಂದದಿಂದ  ಹೀಗೇ ವಸಂತದ ಒಂದು ಸುಂದರ ದಿವಸ ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ. ಮೂಲ: ರವೀಂದ್ರನಾಥ ಟ್ಯಾಗೋರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಟೊಮೇಟೋ ಹಣ್ಣುಗಳು

ಇಮೇಜ್
ಮೂಲ: ಜಾಯ್ ಸಲೈವನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಅದೆಷ್ಟು ದಿನ ಕಾದಿದ್ದೆ ನಾನು ಪ್ರೀತಿಗಾಗಿ ಒಮ್ಮೆಲೇ ದೊರೆಯಿತು ತೋಟದಲ್ಲಿ ಇಂದು ಸೂರ್ಯನ ಶಾಖಕ್ಕೆ ಮಾಗಿ ಕೈತುಂಬಿದವು ಚರಾಸ್ತಿಯಂತೆ ಬೊಗಸೆಗೆ ಬಂದು. ಸಂಜೆಯ ಅಡುಗೆಗೆ ಈಳಿಗೆಮಣೆಯನ್ನೇರಿ  ಉಪ್ಪುಮೆಣಸುಗಳ ಸಿಂಗಾರ ಹೇರಿ ಬ್ರೆಡ್ ತುಂಡುಗಳ ನಡುವೆ ಸೇರಿಕೊಳ್ಳುತ್ತವೆ. ನನ್ನ ನಿತಂಬಗಳು ಹಣ್ಣಾಗುತ್ತವೆ. ಹಣ್ಣಾಗುತ್ತದೆ ನಿನ್ನ ಗಡ್ಡ. ಶೇಖರವಾಗುತ್ತದೆ ಅಂಚೆಗಳ ಗುಡ್ಡ. ಫೋನ್ ಕರೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕ್ಷಮಿಸಿ, ಟೊಮೇಟೋ ತುಂಬಿದೆ ನಮ್ಮ ಬಾಯ್ತುಂಬ. ನಾವು ತೀರಾ ವ್ಯಸ್ತರಾಗಿದ್ದೇವೆ  ಅಲ್ಪರಾಗಿ, ಹಸಿದವರಾಗಿ, ತೊಟ್ಟು ಬಾಳ್ವೆಯ ಬಂಧ.

ದೀಪಗಳು

ಇಮೇಜ್
  ಸಿ ಪಿ ರವಿಕುಮಾರ್ (ಮಹಾದೇವಿ ವರ್ಮಾ ಅವರ ಹಿಂದಿ ಕವಿತೆಯನ್ನು.ಆಧರಿಸಿ) ಹರಿದ್ವಾರದಲ್ಲಿ ಒಂದು ಸಂಜೆ. ಗಂಗೆಗೆ ಆರತಿ ನಡೆಯುತ್ತಿತ್ತು.  ಜನ ತಮ್ಮ ಕೈಗಳಲ್ಲಿ ಆರತಿಯ ತಟ್ಟೆಗಳನ್ನು ಹಿಡಿದು ನಿಂತಿದ್ದರು. ಬಿದಿರಿನ ತಟ್ಟೆಗಳ ಮೇಲೆ ಹಸಿರು ಎಲೆಗಳನ್ನು ಹಾಸಿ ಮೇಲೆ ಹೂವುಗಳನ್ನು ಇರಿಸಲಾಗಿತ್ತು. ಪ್ರತಿಯೊಂದು ತಟ್ಟೆಯಲ್ಲೂ ಒಂದು ದೀಪ.  ಗಂಗೆಯನ್ನು ಪ್ರಾರ್ಥಿಸಿ ಅವಳು ದೀಪವನ್ನು ತೇಲಿಬಿಟ್ಟಳು. ನದಿಯ ಇನ್ನೊಂದು ದಡದಲ್ಲಿ ಅವನು ಕೂಡಾ ದೀಪವನ್ನು ತೇಲಿಬಿಟ್ಟನು. ಅವಳ ಕೈಯಲ್ಲಿ ಪೂಜೆ ಮಾಡಿಸಿದ ಅರ್ಚಕ "ಮನಸ್ಸಿನಲ್ಲಿ ನಿನ್ನ ಆಸೆ ಹೇಳಿಕೋ. ಗಂಗಾ ಮಾತೆ ಖಂಡಿತ ಪೂರೈಸುತ್ತಾಳೆ" ಎಂದು ಹೊರಟು ನಿಂತ. ಅವಳು ಕಣ್ಮುಚ್ಚಿ ಧ್ಯಾನಸ್ಥಳಾದಳು. ತಾನು ಹಚ್ಚಿದ ದೀಪವು ತೇಲುತ್ತಾ ಹೋಗುವುದನ್ನು ನೋಡುತ್ತಾ ನಿಂತಳು. ಸ್ವಲ್ಪ ಹೊತ್ತಿನ ನಂತರ ದೀಪವು ಕಾಣದಂತೆ ಮರೆಯಾಯಿತು. ದೂರದ ದಡದಲ್ಲಿ ಅವನ ಜೊತೆ ಇದ್ದ ಹುಡುಗರು "ಏನು ಕೇಳಿಕೊಂಡೆ ಗಂಗಾಮಾತೆಯಲ್ಲಿ?" ಎಂದು ರೇಗಿಸಿದರು. ಅವಳು ಹಚ್ಚಿದ ದೀಪ ತೇಲುತ್ತಾ ಹೋಗುತ್ತಿತ್ತು. ಅವನು ಹಚ್ಚಿದ ದೀಪ ಓಲಾಡುತ್ತಾ ಅವಳ ದೀಪವನ್ನು ಸಮೀಪಿಸಿತು. ಎರಡೂ ದೀಪಗಳು ಪರಸ್ಪರ ನೋಡಿ ಒಟ್ಟಿಗೆ ತೇಲುತ್ತಾ ಸಾಗಿದವು. ಅವುಗಳ ಅಕ್ಕಪಕ್ಕದಲ್ಲೂ ಅಸಂಖ್ಯ ದೀಪಗಳು ಮಿನುಗುತ್ತಾ ಸಾಗುತ್ತಿದ್ದವು.   ಸಂಜೆ ಕಳೆದು ಕತ್ತಲು ಆವರಿಸಿದಂತೆ ದೀಪಗಳು ನದಿಯಲ್ಲಿ  ತೇಲಿಕೊಂಡು ಹೋಗುವ ದೃಶ್ಯ ಎಲ್ಲ...

ನಡುಗುವ ಜನರಿಗೆ

ಇಮೇಜ್
ಕವಿಗಳು ಅತ್ಯಂತ ಧೈರ್ಯಶಾಲಿಗಳ ಸಾಲಿನಲ್ಲಿ ನಿಲ್ಲುತ್ತೇವೆ. ಬೇರೆಯವರು ಮುಚ್ಚಿಡುವುದನ್ನು ನಾವು ಬಿಚ್ಚಿ ತೋರುತ್ತೇವೆ ನಾಜೂಕಾದದ್ದನ್ನು ಮೇಲೆತ್ತಿ ಅದರ ಮೇಲೆ ಬೆಳಕು ಚೆಲ್ಲಿ ಪಿಸುಗುಡುತ್ತೇವೆ "ನೋಡಿ, ಅನುಭವಿಸುವುದು ಎಂದರೆ ಇದೇ." ಹೃದಯ ಛಿದ್ರವಾದಾಗಲೂ ಅದಕ್ಕೆ ನೀಡುತ್ತೇವೆ  ಭಾಷೆಯ ಬ್ಯಾಂಡೇಜು ಹತ್ತಿ ಎಷ್ಟೇ ಉರಿಯಾದರೂ ಮಸಿಯು ಔಷಧವೆಂಬ ನಂಬಿಕೆ ಬಿತ್ತಿ  ಬರವಣಿಗೆ ಮುಂದುವರೆಸುತ್ತೇವೆ,  ಏಕೆಂದರೆ ಎಲ್ಲಾದರೂ ಇದ್ದಾರು ಜನ ಯಾರಿಗೆ ಬೇಕೋ ತಮ್ಮಂತೆ ನಡುಗುವವರು ಇನ್ನೂ ಇದ್ದಾರೆಂಬ ಸಾಂತ್ವನ. ಮೂಲ: ತಾಲಿಯಾ ಕ್ಲೆಮ್  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಪ್ರೇತನರ್ತನ

ಇಮೇಜ್
 ಈಗ ಮಾಧ್ಯಮದಲ್ಲಿ ಪ್ರತಿನಿತ್ಯ ಪ್ರೇತಗಳ ನರ್ತನ ಎಪ್ಸ್ಟೀನ್ ಮಾಡಿದ ಪಾಪಗಳ ಪುನರಾವರ್ತನ ಒಳ್ಳೆಯ ಕಾರ್ಯಗಳನ್ನು ನೆನಪಿಡಲಾರರು ಜನ ಕೆಟ್ಟದ್ದನ್ನು ಕಾಪಾಡುವರು ನೆನೆಯುವರು ಅನುದಿನ ಹೇಗೆ ವೃದ್ಧಿಸುವುದೋ ಬ್ಯಾಂಕಿನಲ್ಲಿಟ್ಟ ಹಣ ಹಾಗೇ ಬಡ್ಡಿ ಗಳಿಸುವುದು ಕೂಡಿಟ್ಟ ಋಣ ನೀವು ದೊಡ್ಡವರೆಂದು ನಂಬಿದ್ದ ವಿದ್ವಜ್ಜನ ಮುಖವಾಡ ಕಳಚಿ ನೈಜದ ಅನಾವರಣ ಕೊಟ್ಟುಬಿಟ್ಟಿದ್ದೇವೆ ಇವರಲ್ಲಿ ಹಲವರಿಗೆ ಪದ್ಮಭೂಷಣ  ಅವಾರ್ಡ್ ವಾಪಸಿಗೆ ಈಗ ಅತ್ಯಂತ ಸೂಕ್ತ ಕ್ಷಣ

ಮೂರು ವ್ಯಾಲೆಂಟೈನ್ ಗುಲಾಬಿಗಳು

ಇಮೇಜ್
  ಮೂರು ವ್ಯಾಲೆಂಟೈನ್ ಗುಲಾಬಿಗಳು (೧) "ಕಾಸಿಮಿರ್! ಕಾಸಿಮೀರ್! ಎಲ್ಲಿ ಹೋದ ಈ ಹುಡುಗ!"  ತಾಯಿ ತನ್ನ ಮಗನನ್ನು ಜೋರಾಗಿ ಕರೆಯುತ್ತಾ ತಲೆಬಾಗಿಲಿನ ಹತ್ತಿರ ಬಂದಳು. ಅವರದ್ದು ದೊಡ್ಡ ಮನೆ. ಮಹಡಿಯ ಮೂರು ಕೋಣೆಗಳಲ್ಲದೆ ಕೆಳಗೆ ನಾಲ್ಕು ಕೋಣೆಗಳು, ದೊಡ್ಡ ಬೈಠಕ್ ಖಾನೆ. ಆರು ಮಕ್ಕಳ ದೊಡ್ಡ ಸಂಸಾರ. ಕಾಸಿಮಿರ್ ಹಿರಿಯ ಮಗ. ತಂದೆತಾಯಿಯ ಅಚ್ಚುಮೆಚ್ಚು. ಗಣಿತದಲ್ಲಿ ಅವನು ತುಂಬಾ ಪ್ರತಿಭಾಶಾಲಿ ಎಂದು ಅವನ ಶಾಲೆಯ ಉಪಾಧ್ಯಾಯರು ಮನೆಗೇ ಬಂದು ತಿಳಿಸಿದ್ದರು. "ನಿಮ್ಮ ಹುಡುಗ ಮುಂದೆ ಖಂಡಿತಾ ದೊಡ್ಡ ಗಣಿತಶಾಸ್ತ್ರಜ್ಞ ಆಗುತ್ತಾನೆ, ನೋಡುತ್ತಿರಿ! ಅವನನ್ನು ಮುಂದೆ ಓದಿಸಿ. ಕಾಲೇಜಿಗೆ ಹೋಗಿ ಪಿಎಚ್. ಡಿ. ಮಾಡಲಿ. ನಾನು ಈ ಮಾತನ್ನು ಎಲ್ಲಾ ಪೋಷಕರಿಗೂ ಹೇಳುವುದಿಲ್ಲ!" ಎಂದು ಪ್ರೊ. ಕಮಿನ್ಸ್ಕಿ ಹೇಳುತ್ತಿದ್ದಾಗ ತಾಯಿಯ ಎದೆ ಹೆಮ್ಮೆಯಿಂದ ಉಬ್ಬಿತು. ಅವಳು ತಟ್ಟೆಯಲ್ಲಿ ಎಲೆಕೋಸಿನ ಖಾದ್ಯಗಳನ್ನು ತಂದಿಟ್ಟಳು. ಬಟ್ಟಲಿಗೆ ಬಿಸಿ ಚಹಾ ಸುರಿದು "ದಯವಿಟ್ಟು ಸ್ವೀಕರಿಸಿ" ಎಂದಳು. ಪ್ರೊ. ಕಮಿನ್ಸ್ಕಿ ತೆರಳಿದ ಮೇಲೆ ಅವಳು ಪತಿಯ ಕಡೆ ನೋಡಿ "ನಮ್ಮ ಕಾಸಿಮಿರ್ ಖಂಡಿತಾ ಪೋಲೆಂಡ್ ದೇಶಕ್ಕೆ ಹೆಸರು ತರುತ್ತಾನೆ!" ಎಂದಳು. ಹಳೆಯದನ್ನೆಲ್ಲ ನೆನೆದು ಅವಳ ಕಂಠ ಗದ್ಗದವಾಯಿತು. ಕ್ಯಾಸಿಮಿರಾ ಮನೆಯ ಬಾಗಿಲಿನಲ್ಲಿ ನಿಂತು ಸುತ್ತಲೂ ನೋಡಿದಳು. ದೂರದಲ್ಲಿ ಕ್ಯಾಸಿಮಿರ್ ಬರುತ್ತಿದ್ದುದು ಕಾಣಿಸಿತು. ಅವನ ಕೈಯಲ್ಲಿ ಪುಸ...

ಆತ್ಮ ಉಳ್ಳವರಿಗಾಗಿ ಸೂಚನೆಗಳು

ಇಮೇಜ್
  ಮೂಲ : ಜೋಸೆಫ್ ಫಸಾನೋ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಅದನ್ನು ಆಗಾಗ ಹೊರಗೆ ಮಳೆಯಲ್ಲಿ ಕೊಂಡೊಯ್ದು ತೊಯ್ಯಿಸಿ  ತೊಳೆಯಿರಿ ಅದರ ಅಗಾಧ ರೆಕ್ಕೆಗಳ ಮೇಲೆ ಕೂಡುವ ಮಣ್ಣುಮಸಿ  ಅದು ನಿಮ್ಮನ್ನು ಕೊಲ್ಲಲು ಬಂದಿತಾದರೆ ಅದಕ್ಕೆ ಒಂದೇ ಕಾರಣ ನೀವು ಒಂದು ನಿಮಿಷಕ್ಕಿಂತ ಹೆಚ್ಚು ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ ಇನ್ನೊಬ್ಬರನ್ನ. ಈ ದೃಷ್ಟಿಗಳ ಮಿಲನ ಅದಕ್ಕೆ ಎಷ್ಟು ಅಗತ್ಯವೆಂದರೆ ದುಂಬಿಗೆ ಅಗತ್ಯವಿದ್ದಷ್ಟು ಹೂತುಟಿಯ ಇಬ್ಬನಿಯ ಸುರೆ. ಆಗಾಗ ಕರೆದೊಯ್ಯಿರಿ ಅದನ್ನು ಪ್ರವಾಸಕ್ಕೆ.  ಕಠಿಣವೆನ್ನಿಸುವ ಹೊತ್ತಿಗೆಗಳನ್ನು ಓದಲು ಪ್ರೇರೇಪಿಸಿ. ನೋಡಗೊಡಿ ಕಣ್ಣಲ್ಲಿ ಕಣ್ಣಿಟ್ಟು ಕಡಲಾಳ. ಕೊಡಬಹುದು ಚಿಪ್ಸ್, ಮತ್ತು ನೀರಿಗೆ ವಿಸ್ಕಿ ಬೆರೆಸಿ. ಆದರೆ ಆಗಾಗ ಪವಿತ್ರ ಸ್ಥಾನದ ಮುಂದೆ ಅಡ್ಡ ಬೀಳಲಿ. ಬೇರೇನಿಲ್ಲ ಅದಕ್ಕೆ ಜೀವಿಸುವ ಆಸೆ ಮತ್ತು ಸುಂದರವಾಗುವ ಖಯಾಲಿ. ಬೇರು ಬಿಟ್ಟು ಅರಳುತ್ತದೆ ಅದನ್ನು ಪೋಷಿಸಿದರೆ ತನುಮನಗಳು ಬತ್ತುತ್ತವೆ ಅದನ್ನುಉಪವಾಸ ಕೆಡವಿದರೆ. ಕಿತ್ತು ಬರುತ್ತದೆ ಜಗತ್ತು. ಸ್ತಬ್ಧವಾಗುತ್ತವೆ ಸಂಗೀತ, ನೃತ್ಯ ಪದಗತಿ. ಬೀಳುತ್ತದೆ ಮೇಲಿಂದ ರಾಕೆಟ್. ಅಗ್ನಿಗೆ ಮಕ್ಕಳ ಆಹುತಿ. ಇಲ್ಲಿ ಕೇಳು, ಇನ್ನೂ ಕಾಲ ಮಿಂಚಿಲ್ಲ  ಅದನ್ನು ಎಬ್ಬಿಸಲು. ಕೂಗಿ ಕರೆ ಮರೆತುಹೋದ ಹೆಸರುಗಳನ್ನು ಈಗಲೂ: ಕಾಜಾಣ, ಗೊರವಂಕ, ಗುಬ್ಬಿ, ಮುತ್ತುಗ, ಮಂದಾರ ಉಳಿಸಲಾರೆ ಜಗತ್ತನ್ನು ಆದರೆ ತೆರೆದು ನೆಲಮಾಳಿಗೆಯ ದ್ವ...

ಸರ್ವಾಧಿಕಾರಿಯ ಮೃತ್ಯುಶಾಸನ

 ಸರ್ವಾಧಿಕಾರಿಯ ಮೃತ್ಯುಶಾಸನ ಅವನು ಹುಡುಕಾಡುತ್ತಿದ್ದ ವಸ್ತು: ಒಂದು ಬಗೆಯ ಪರಿಪೂರ್ಣತೆ ನೇರವಾಗಿ ಮುಟ್ಟುವಂತಿತ್ತು ಅವನು ಹುಟ್ಟುಹಾಕಿದ ಕವಿತೆ ಜನರು ಏನೇನು ಮಾಡಿಕೊಳ್ಳುತ್ತಾರೆ ಎಡವಟ್ಟು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನಿಗೆ ಇದ್ದ ಪ್ರಮುಖ ಆಸಕ್ತಿ  ಸೈನ್ಯಗಳು, ನೌಕೆಗಳು, ಪರಮಾಣುಶಕ್ತಿ. ಅವನು ನಕ್ಕಾಗ ಪಕ್ಕದಲ್ಲಿದ್ದ ಗೌರವಾನ್ವಿತ ನಾಯಕರ ಹಿಂಡು ಕೇಕೆ ಹಾಕುತ್ತಾ ನಗುತ್ತಿತ್ತು ಪಕ್ಕೆ ಹಿಡಿದುಕೊಂಡು ಅವನು ಅತ್ತಾಗ ಏನೆಂದರೆ ಉಂಟಾಗುತ್ತಿದ್ದ ಪರಿಣಾಮ  ಬೀದಿ ಬೀದಿಗಳಲ್ಲಿ ಬೀಳುವ ಪುಟ್ಟ ಮಕ್ಕಳ ಹೆಣ. ಮೂಲ: ಡಬ್ಲ್ಯೂ ಎಚ್ ಆಡೆನ್  ಅನುವಾದ: ಸಿ ಪಿ ರವಿಕುಮಾರ್

ವಿಕ್ಟರ್

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ಡಬ್ಲ್ಯೂ.ಎಚ್. ಆಡೆನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಈ ಜಗತ್ತನ್ನು ಹೊಕ್ಕಾಗ  ವಿಕ್ಟರ್ ಎಂಬ ಪುಟ್ಟ ಮಗು ತೊಡೆಯ ಮೇಲಿಟ್ಟುಕೊಂಡು ಅಪ್ಪ ಅಂದಿದ್ದು: "ಕುಲದ ಹೆಸರನ್ನು ಕೆಡಿಸದಿರು ಎಂದೂ" ಅಪ್ಪನ ಕಡೆಗೆ ನೋಡಿದನು ವಿಕ್ಟರ್ ಪಿಳಿಪಿಳಿ ತನ್ನ ಕಣ್ಣುಗಳ ಅರಳಿಸಿ ಅಪ್ಪನೆಂದ: "ನನ್ನ ಒಬ್ಬನೇ ಮಗ ವಿಕ್ಟರ್, ಜೀವನದಲ್ಲಿ ಎಂದಿಗೂ ನುಡಿಯದಿರು ಹುಸಿ" ಹೊರಟಾಗ ವಿಕ್ಟರ್ ಅಪ್ಪನ ಜೊತೆಗೆ ವಾಯುವಿಹಾರಕ್ಕೆ ಕುದುರೆ ಬಂಡಿಯಲ್ಲಿ ಕುಳಿತು ಅಪ್ಪ ಜೋಬಿನಿಂದ ತೆಗೆದು ಬೈಬಲ್ ಓದಿದ: "ಶುದ್ಧಹೃದಯರಿಗೆ ಸಿಕ್ಕುವುದು ದೈವಾಶೀರ್ವಾದ" ಅದೊಂದು ಕೊರೆವ ಡಿಸೆಂಬರ್ ತಿಂಗಳು ವಿಕ್ಟರ್ ಗೆ ಇನ್ನೂ ಪ್ರಾಯ ಹದಿನೆಂಟು ಮುದ್ದಾಗಿತ್ತು ಆದರೂ ಅವನ ಕೈಬರವಣಿಗೆ ಮತ್ತು ಶುದ್ಧವಾಗಿದ್ದವು ಅವನ ಮಣಿಕಟ್ಟು ದ ಪೆವೆರಿಲ್ ಎಂಬ ಮರ್ಯಾದಸ್ತರ ಲಾಡ್ಜ್ ಅಲ್ಲಿ ವಿಕ್ಟರ್ ಮಾಡಿಕೊಂಡಿದ್ದ ಪುಟ್ಟ ಕೋಣೆ ಕಾಲವು ಅವನ ಮೇಲೆ ಕಣ್ಣಿಟ್ಟಿತ್ತು ಪ್ರತಿದಿನವೂ ಬೆಕ್ಕು ಕಣ್ಣಿಟ್ಟಂತೆ ಇಲಿಯ ಮೇಲೆ ಹೆಗಲ ಮೇಲೆ ಕೈಯಿಟ್ಟು ಸಹೋದ್ಯೋಗಿಗಳು "ವಿಕ್ಟರ್! ಹೆಣ್ಣಿನ ಸಂಗ ಮಾಡಿರುವೆಯಾ ಎಂದಾದರೂ? ನಡೆ ನಮ್ಮ ಜೊತೆ ಶನಿವಾರ ರಾತ್ರಿ ಪೇಟೆಗೆ!" ಎಂದಾಗ ತಲೆ ಅಲ್ಲಾಡಿಸುತ್ತಿದ್ದ ಮುಗುಳ್ನಕ್ಕು ಕೊರೋನಾ ಸಿಗಾರ್ ಸೇದುವ ಮ್ಯಾನೇಜರ್ ಎಂದ: "ಅಯ್ಯೋ ಅವನೊಬ್ಬ ಸಾಧು ಪ್ರಾಣಿ! ಅಷ್ಟೊಂದು ಮುಂದುವರೆವ...

ಕರುಣಿಸು ಅರೋಚಕ ಕಾಲಮಾನವನ್ನು

ಇಮೇಜ್
  ಕರುಣಿಸು ಪ್ರಭೂ ಒಂದು ನಿಧಾನ ಸುದ್ದಿಯ ದಿನವ, ಕಾಲ ಸರಿಯುವುದನ್ನು ಹೊರತು  ಕಾಫಿ ಕುಡಿಯುವುದನ್ನು ಬಿಟ್ಟು ಟಿವಿಯಲ್ಲಿ ಯಾವುದೋ ಹಳೆಯ ಧಾರಾವಾಹಿ  ನೋಡುವುದನ್ನು ಹೊರತಾಗಿ ಹೆಚ್ಚೇನೂ ನಡೆಯದ ನಿಶ್ಶಬ್ದ ನಿರಾಡಂಬರ ದಿವಸವೊಂದನ್ನು. ಕರುಣಿಸು ಸುದ್ದಿಗಳಿಲ್ಲದ ಒಂದು ದಿನವ, ತಲೆಗೊಂದು ಹರಟೆ  ಬುಡವಿಲ್ಲದ ಅಭಿಪ್ರಾಯ ಐರುಗೈರುಗಳಿಂದ ಕೇಳಬೇಕಾದ ದಿನವ. ಏನೂ ಜರುಗಲೇ ಬಾರದು ಅಂಥ ದಿವಸ, ಹೆಚ್ಚೆಂದರೆ ಒಂದೆರಡು ಗಂಟೆ ಒಡನಾಟ, ಸ್ಥಳೀಯ ಹವಾಮಾನದ ಕಡೆ ಕಣ್ಣೋಟ, ನೆನಪಿನಲ್ಲಿಡಲು ಪ್ರಯಾಸ ಪಡಬೇಕಾದ ದಿವಸ. ಮೂಲ: ಬ್ರಯಾನ್ ಬಿಲ್ಸ್ಟನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್

ಪೀಳಿಗೆಗಳು

ಇಮೇಜ್
2017 ಹೊಸವರ್ಷ ಕಾಲಿಡುವ ಹಿಂದಿನ ರಾತ್ರಿ  ನನಗೆ ನೆನಪಿದೆ ಇನ್ನೂ. ಅಂದು ಚಳಿಗಾಲದಲ್ಲೂ  ತೀಕ್ಷ್ಣವಾಗಿತ್ತು ಬಾನಿನ ಕಣ್ಣು. ಕೈಯಲ್ಲಿ ಒಂದು ಮರದ ಸ್ಪೂನ್ ಹಿಡಿದು ನಾನು ಅಡುಗೆಮನೆಯಲ್ಲಿ ನಿಂತಿದ್ದೆ . ನಡುಮನೆಯಲ್ಲಿ ಅಮ್ಮ  ಸೇಬು, ಕ್ರ್ಯಾಕರ್ಸ್ ಮತ್ತು ಗಿಣ್ಣು ತಿನ್ನುತ್ತ ಟಿವಿ ನೋಡುತ್ತಿದ್ದಳು. ಹಿಂದಿನ ನಿಶಬ್ದ ಕೋಣೆಯಲ್ಲಿ  ತಳ್ಳುಗಾಡಿಯೊಂದರಲ್ಲಿ  ನನ್ನ ಮೊಮ್ಮಗ ನಿದ್ದೆ ಹೋಗಿದ್ದ. ಇಬ್ಬರೂ ನೆಮ್ಮದಿಯಾಗಿದ್ದರು  ತಮ್ಮ ಪಾಡಿಗೆ ತಾವು. ಒಬ್ಬರಿಗೆ ತೊಂಬತ್ತು  ಇನ್ನೊಬ್ಬರಿಗೆ ಒಂದು ತುಂಬಿತ್ತು. ನಾನು ಇವಬ್ಬರಿಗೂ ಸಂಬಂಧಿ. ಅಷ್ಟೇ ಇನ್ನೇನೂ ಇಲ್ಲ. ನನ್ನ ಜೀವನದ ಅತ್ಯಂತ ಸುಂದರ ಕ್ಷಣ. ಮೂಲ: ನಯೋಮಿ ಶಿಹಾಬ್ ನೈ ಅನುವಾದ: ಸಿ ಪಿ ರವಿಕುಮಾರ್ At the end of an unseasonably warm day New Year’s Eve 2017 I stood in my kitchen holding one wooden spoon. My mom was watching TV in the living room eating apples, crackers, and cheese. My grandson slept in a stroller in a quiet back room. I was related to both people, ages ninety and one. They were peaceful. And that was it. The most beautiful moment of my life.

ಅರ್ಪಣೆ

ಇಮೇಜ್
ಮೂಲ: ಜಾಯ್ ಆಸ್ಬಾರ್ನ್ ಕನ್ನಡಕ್ಕೆ.: ಸಿ ಪಿ ರವಿಕುಮಾರ್  ತೊಡಗಿರುತ್ತಾರಲ್ಲ ನಿಶ್ಶಬ್ದ ಕದನದಲ್ಲಿ  ಬದುಕುತ್ತ  ಮುಚ್ಚಿದ ಕದಗಳ ನೇಪಥ್ಯದಲ್ಲಿ ಈ ಕವಿತೆ ಅಂಥವರಿಗಾಗಿ ಮರೆಮಾಚಲು ನೋವನ್ನು  ನಗೆಮುಸುಕು ತೊಟ್ಟು ಇವರ ಮುಗುಳ್ನಗೆ ನೆರಳು ಗಾವುದದಷ್ಟು   ಈ ಕವಿತೆ ಅಂಥವರಿಗಾಗಿ ಮುರಿದ ರೆಕ್ಕೆಯ ಹಕ್ಕಿಗಳು ಆದರೂ ಬೆಳಗಾಗ ಹಾಡುವ ಧೈರ್ಯ ತೋರುವರು ಈ ಕವಿತೆ ಅಂಥವರಿಗಾಗಿ ಸ್ವಾಗತಿಸಿ ದಿವಸವು ತರುವ ಕಷ್ಟ ಶಾಖೋಪಶಾಖೆ ಎಲ್ಲದರಲ್ಲೂ ಕಾಣುವರಲ್ಲ ಹೊಂಬೆಳಕಿನ ರೇಖೆ  ಈ ಕವಿತೆ ಅಂಥವರಿಗಾಗಿ

ಹಿಮ ಬಿದ್ದ ದಿವಸ

ಇಮೇಜ್
  ಮೂಲ: ಬೆನ್ ಬಾನ್ಯಾರ್ಡ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಅಂಗಡಿಗೆ ಹೋಗಿ ಹಾಲು ಬ್ರೆಡ್ ಮತ್ತು ಬೆಂದ ಬೀನ್ಸ್ ಒಂದಿಷ್ಟು  ತುಂಬಿಸಿಕೊಂಡು ಬರೋಣ ಅಂದಷ್ಟೇ ಇರಾದೆಯಾಗಿತ್ತು ಆದರೆ ನೋಡಿ ಮಂಜು  ಸಿಕ್ಕಿಹಾಕಿಸಿದೆ ಎಲ್ಲೋ ನಡುವಿನಲ್ಲಿ  ಸುತ್ತಲೂ ಹರಡಿಕೊಂಡ ಹೊಳೆವ ಬಿಳಿ ಮಡುವಿನಲ್ಲಿ ಕಟ್ಟಲಾಗದು ಉಂಡೆ ಹಿಮವನ್ನು ಕೊಡಲಾಗದು ಹಿಮಮಾನವನ ಆಕಾರ ಎರಡು ವರ್ಷಗಳ ನಂತರ ಇಂಥ ಪುಡಿಪುಡಿಯಾದ ಹಿಮದ ಪುನರಾವತಾರ ಆದರೆ ಅಂಗಾತ ಮಲಗಿ ಚಲಿಸಿದರೆ ಕೈಗಳನ್ನು ಅತ್ತಿತ್ತ ಮೋಸವಿಲ್ಲದೆ ಮೂಡುವುದು ಹಿಮದಲ್ಲಿ ದೇವತೆಯ ಚಿತ್ರ. ಮಲಗಿದಲ್ಲೇ ನೋಡಿದರೆ ಗಾಯಗೊಂಡ ಆಕಾಶದತ್ತ ಕಾಲರಿನ ಮೇಲೆ ಬೀಳುವುದು ಹಿಮ ತಪ್ಪೊಪ್ಪಿಕೊಳ್ಳುತ್ತಾ.  ಸ್ತಬ್ಧವಾಗಿದೆ ಕೊನೆಗೂ ವಾಹನಗಳ ಕರ್ಕಶ ಇಂಜಿನ್ ಮೊರೆತ ಬದಲಿಗೆ ಕೇಳುತ್ತಿದೆ ಮಕ್ಕಳ ನಗೆ ಕೇಕೆ ಧಡಬಡ ಓಡಾಟ. ರಾಬಿನ್ ಹಕ್ಕಿಯೊಂದು ಕೂತಿದೆ  ಕ್ರಿಸ್ಮಸ್ ಕಾರ್ಡಿಗೆ ಭಂಗಿ ನೀಡುತ್ತ ಮಲಗಿದಲ್ಲೇ ಯೋಚಿಸುತ್ತೇನೆ ಇನ್ನೆಷ್ಟು ಹೊತ್ತು ಇದ್ದೀತು ಈ ಅದೃಷ್ಟ?

ಚಳಿಗಾಲದ ಪದ್ಯ

ಇಮೇಜ್
  ಮೂಲ: ನಿಕ್ಕಿ ಜಿಯೋವನಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ನನ್ನ ಹುಬ್ಬಿನ ಮೇಲೆ ಒಮ್ಮೆ ಜಾರಿ ಬಿದ್ದಾಗ ಒಂದು ಹಿಮಕಣ ನನಗದು  ಆಪ್ಯಾಯವೆನ್ನಿಸಿ ಅದಕ್ಕೆ ಮುತ್ತಿಟ್ಟಾಗ ಅದಕ್ಕೆಷ್ಟು ಸಂತೋಷವಾಯಿತು  ಎಂದರೆ ಕರೆದು ತಂದಿತು ತನ್ನ ಅಕ್ಕ ತಮ್ಮ ಅಣ್ಣ ತಂಗಿ  ಬಳಗವನ್ನೆಲ್ಲಾ  ಮತ್ತು ಹೀಗೆ ನನ್ನ ಸುತ್ತ ಹೆಣೆದುಕೊಂಡ  ಹಿಮದ ಬಲೆಯನ್ನು  ನಾನು ಔಕಿದಾಗ ಸುರಿಯಿತು ವಸಂತದ ಮಳೆ ಮತ್ತು ನಾನು ಅದರ ಕೆಳಗೆ ಮಿಸುಕಾದಡೆ ನಿಂತು ಒಂದು ಹೂವಾಗಿ ಅರಳಿದೆ.

ಗೋಚರ

ಇಮೇಜ್
ನೋಡಿದೆನು ನಾನು  ಹಸಿರೆಲೆಯ ನಡುವೆ  ಒಂದು ನೀಲಿ ಚುಕ್ಕಿ __ ನೋಡಿದೆನು ತಿರುಗಿ ನಕ್ಷತ್ರವಲ್ಲ ನಭನೀಲ ವರ್ಣ ಹಕ್ಕಿ! ನೋಡಿದೆನು ನಾನು ಲತೆಯಲ್ಲಿ ತೂಗುತಿಹ ರಸಪೂರ್ಣ ಕಪ್ಪು ದ್ರಾಕ್ಷಿ __ ನೋಡಿದೆನು ತಿರುಗಿ ಕಾಣಿಸಿತು ಅಲ್ಲಿ ಕವಿತೆಗಳ ಕಾವ್ಯರಾಶಿ! ನೋಡಿದೆನು ನಾನು ನದಿಯೊಂದು ಹರಿದು  ಸೇರುವುದು ಕಡಲಪಾತ್ರ __ ನೋಡಿದೆನು ತಿರುಗಿ ಕಾಣಿಸಿತು ಅಲ್ಲಿ ಜೀವನದ ಛಾಯೆ ಮಾತ್ರ! ಜಲಪಾತವಾಗಿ ಭೋರ್ಗರೆದು ಹರಿದ ಚಂಚಲತೆಯನ್ನು ತೊರೆದು ನದಿ ಶಾಂತವಾಗಿ ಬರಿದಾಗುತಿತ್ತು ತನ್ನೆಲ್ಲವನ್ನೂ ಸುರಿದು! ಸಿ ಪಿ ರವಿಕುಮಾರ್ ಡಿಸೆಂಬರ್ ೧೩, ೨೦೨೫

ಚಳಿಗಾಲದ ಕೋಟ್

ಇಮೇಜ್
  ಮೂಲ: ರೋಸಿತಾ ಬೋಲ್ಯಾಂಡ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಎಸೆಯಲು ಮನಸ್ಸಿಲ್ಲದೆ ಎಷ್ಟೋ ವರ್ಷಗಳಿಂದ ಅಮ್ಮ ಅಡಗಿಸಿ ಇಟ್ಟಿದ್ದ ಅವಳ ಹಳೆಯ ಬಟ್ಟೆಬರೆ  ಒಂದು ದಿನ ಸಿಕ್ಕಿಬಿದ್ದವು ನನ್ನ ಕೈಗೆ. ನಾನೀಗ ಧರಿಸುತ್ತೇನೆ ಅವಳ ಕಾಟನ್ ಉಡುಪು ಅದರ ಒಡಲಿನ ತುಂಬಾ ಗುಲಾಬಿ ಹಳದಿಕೆಂಪು; ಗಟ್ಟಿನಾರಿನ ಬಟ್ಟೆಯ ಹಳೇ ಮಾದರಿಯ ಸೂಟ್, ಮತ್ತು ನನ್ನ ಅಚ್ಚುಮೆಚ್ಚಿನ  ಕಾಶ್ಮೀರದ ಮೇಕೆ ತುಪ್ಪುಟದ  ಕೋಟ್  ಆಪ್ಯಾಯವಾಗಿದೆ ಈ ಚಳಿಗೆ. ಪ್ರತಿವರ್ಷ ಈ ಕೋಟ್ ಹೋಗಿಬರುತ್ತದೆ ಡ್ರೈ ಕ್ಲೀನ್ ಅಂಗಡಿಗೆ ಹುಡುಕಾಡುತ್ತೇನೆ ಅದರ ಬಿದ್ದುಹೋದ ಗುಂಡಿಗೆ ಆಸ್ಥೆಯಿಂದ ಪೋಣಿಸಿ ಸೂಜಿ ದಾರ  ಸರಿಪಡಿಸುತ್ತೇನೆ ಬಿಚ್ಚಿಹೋದ ಹೊಲಿಗೆ. ಪಕ್ಕೆಗಳ ಹತ್ತಿರ ಬಿಟ್ಟುಕೊಳ್ಳುತ್ತಿರುವ ಬಾಯಿ ಮತ್ತು ಒಳಗಿಂದ ಇಣುಕುತ್ತಿರುವ ಸ್ಯಾಟಿನ್ ಒಳಪದರ: ನನ್ನ ದಿವ್ಯ ನಿರ್ಲಕ್ಷ್ಯ ನೋಟ ಇವುಗಳ ಕಡೆಗೆ.  ಈಚೆಗಷ್ಟೇ ಅಮ್ಮ ಬಿಟ್ಟುಕೊಟ್ಟಳು ಗುಟ್ಟು ಈ ಕೋಟ್ ಅವಳು ಕೊಂಡದ್ದು  ನನ್ನನ್ನು ಗರ್ಭದಲ್ಲಿ ಧರಿಸಿದ್ದ ಶರತ್ಕಾಲದಲ್ಲಂತೆ. ಅಂದಿನಿಂದಲಾಗಾಯ್ತು ಬೆಳಗಿನ ಕುಳಿರ್ಗಾಳಿಯಲ್ಲಿ ಇನ್ನಷ್ಟು ಬಲವಾಗಿ ಅಪ್ಪಿಕೊಂಡು ಕೋಟನ್ನು  ಬೀಗುತ್ತೇನೆ ಹೆಣೆಯುತ್ತಾ ಮನದಲ್ಲಿ ಹೊಸ ಸಾಧ್ಯತೆ. ಥೇಟ್ ಹಾಗೇ, ಹೇಗೆ ಅಮ್ಮ ಆ ವರ್ಷ ಇದನ್ನು ಧರಿಸಿ ಓಡಾಡುತ್ತಾ ಕಂಡಿರಬಹುದೋ ಹಾಗೆ ಈ ಕೋಟ್ ಒಳಗೆ ಹುದುಗಿದ್ದಾಗ  ನಮ್ಮಿಬ್ಬರದ್ದೂ ರೂಪುರೇಷೆ.

ಪುಸ್ತಕಪ್ರೇಮ

ಇಮೇಜ್
 ಎಲ್ಲ ಸಂಪುಟಗಳ ಬೆನ್ನೆಲುಬುಗಳೂ ಬಿರುಕು ಬಿಟ್ಟು ಬಯಲಾಗಿ ಎಲ್ಲ ಕಥನಕುತೂಹಲಗಳ ಗುಟ್ಟು ವಿದಾಯ ಹೇಳಿದವು  ಸುಪರಿಚಿತ ಪಾತ್ರಗಳೆಲ್ಲ ಮತ್ತು ನಸುಕಿನವರೆಗೂ ಮೌನವೇ ಮರುನುಡಿಯುತ್ತಿತ್ತು. ಆಗ ನಡುಗುವ ಕೈಗಳನ್ನು ಮೇಲೆತ್ತಿ ಪಣ ತೊಟ್ಟು ನಿರ್ಧರಿಸಿದೆ ಊರಿಗೆ ಹೋಗಲೇ ಬೇಕು ಇವತ್ತು ಕನಿಷ್ಠ ಪುಸ್ತಕದಂಗಡಿಯ ಬಾಗಿಲಿನವರೆಗಾದರೂ ಸಾಗಿ ವ್ಯಯಿಸಬೇಕು ಕೂಡಿಟ್ಟ ಅಷ್ಟಿಷ್ಟು ಸಂಪತ್ತು. ಖಂಡಿತ ಯಾವ ಖಾಲಿ ಕಪಾಟಿಗೂ ಇರದು ನನ್ನ ಪಾಡನ್ನು ನೋಡಿ ನಗುವ ಗಮ್ಮತ್ತು ಯಾವ ಅನಾಥ ಮೂಲೆಗೂ ಇರದು ಮಂದ ಬೆಳಕಿನ ನಸೀಬು, ಕತ್ತಲೆಯ ನೌಬತ್ತು. ಮೂಲ: ಶರ್ಲೀನ್ ಸೈಲಡನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್

ಕಾಗೆ ಮತ್ತು ಗೂಗೆ

 ನಾನು ನರ್ತಿಸಲೇ ಎಂದು ಕೇಳಿತು ಕಾಗೆ ಕೆಳಗೆ ನೋಡುತ್ತಿತ್ತು ಮರದಲ್ಲಿದ್ದ ಗೂಗೆ  ಬೇಕೆನ್ನಿಸಿದ್ದು ಮಾಡು ಎಂದು ಉತ್ತರಿಸಿದಾಗ ಗೂಗೆ  ಏನೂ ತೋರದೆ ಮುಖ ಗಂಟಿಕ್ಕಿತು ಕಾಗೆ ನಾನು ಕೇಳಿದ್ದು ನಿನ್ನ ಅನುಮತಿಯನ್ನು ಎಂದು ಕಾಗೆಯು ಕಾಲಿಂದ ಕೆದರಿತು ಮಣ್ಣು ನೀನು ಹಾರಬಲ್ಲೆ, ನೆನಪಿರಲಿ, ನೀನು ಹಕ್ಕಿ, ಪದಗಳ ಬಲೆಯಲ್ಲಿ ಕೊಳ್ಳದಿರು ಸಿಕ್ಕಿ. ಮೂಲ: ಮಾರ್ಟಿನ್ ಹಿಚ್  ಕನ್ನಡಕ್ಕೆ - ಸಿ ಪಿ ರವಿಕುಮಾರ್