ಬೀಜಗಳು


ಮೂಲ ಇಂಗ್ಲಿಷ್ ಕವಿತೆ : ವಾಲ್ಟರ್ ಡಿ ಲ ಮೇರ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Image result for sprout seedling wikipedia

ವಾರಗಟ್ಟಲೆ ಮಾಯವಾಗಿದ್ದವು ನಾನು ಬಿತ್ತಿದ ಬೀಜಗಳು 
ಈಗ ನೆಲದಿಂದೆದ್ದಿವೆ ಗಿಡ್ಡನೆಯ ಹಸಿರು ಕಡ್ಡಿಗಳಾಗಿ - 
ಮಣ್ಣು ಹೆಂಟೆಯಿದ್ದರೂ ಮೇಲೇಳಲಾರವು,
ಅಷ್ಟು ದುರ್ಬಲವಾಗಿವೆ ಪುಟ್ಟ ಸಸಿ!
ಆದರೆ ವಾಸ್ತವ ಹಾಗಿಲ್ಲ; ಅಲ್ಲೇ ಬಳಿಯಲ್ಲಿ ಬಿದ್ದಿದೆ 
ಒಂದು ಕಲ್ಲು,  ಗಜ್ಜುಗದಷ್ಟಿದೆ ಗಾತ್ರದಲ್ಲಿ. 
ಬಿಸಿಲಿಗೆ ಮೈಯೊಡ್ಡಿ, ದಿವಸವನ್ನು ನೋಡಲೆಂದು  
ಯಃಕಶ್ಚಿತ್ ಸಸಿ ಕತ್ತೆತ್ತಿದೆ ಕಲ್ಲನ್ನು ದೂರ ಸರಿಸಿ!


ಕಾಮೆಂಟ್‌ಗಳು

  1. The seeds I sowed -
    For week unseen -
    Have pushed up pygmy
    Shoots of green;
    So frail you'd think
    The tiniest stone
    Would never let
    A glimpse be shown.
    But no; a pebble
    Near them lies,
    At least a cherry-stone
    In size,
    Which that mere sprout
    Has heaved away,
    To bask in sunshine,
    See the Day.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)