ಕೆಟ್ಟವರು










ಕೆಟ್ಟವರು 
ಮೂಲ: ಯಾವೋ ಫೆಂಗ್ (ಚೈನಾ)
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 

ಕೆಲವರನ್ನು ಕುರಿತು ಅವರು ಕೆಟ್ಟವರೆಂದು ಅನುಮಾನ ಬಂದರೂ 
ಒಳ್ಳೆಯವರೆಂದೇ ನಂಬುತ್ತಾ  ಅವರೊಂದಿಗೆ ವ್ಯವಹರಿಸುತ್ತೇನೆ 
ಹೇಗೆ ನ್ಯಾಯವು ತೀರ್ಪು ನೀಡುವ ಮುನ್ನ 
ಆಪಾದಿತರನ್ನು ಮುಗ್ಧರೆಂದೇ ನಂಬುತ್ತದಲ್ಲ, ಹಾಗೆ. 
ಹಿಂದೊಮ್ಮೆ ಕೆಟ್ಟವರೆಂದರೆ 
ಕ್ರಿಕೆಟ್ ಕ್ಯಾಪ್ ಹಾಕಿಕೊಳ್ಳುತ್ತಿದ್ದರು, 
ಅವರ ತುಟಿಗಳ ತುದಿಯಲ್ಲಿ ವಕ್ರವಾದ ಸಿಗರೆಟ್ ತುಂಡು
ನನ್ನ ಬಾಲ್ಯದ ಬೆಳ್ಳಿತೆರೆಯ ಮೇಲೆ 
ಇವರೆಲ್ಲರೂ ದುಷ್ಟತನದ ಅಪರಾವತಾರಗಳು.  
ಈಗ ನನಗೆ ಜ್ಞಾನೋದಯವಾಗಿದೆ. 
ನನ್ನ ಬಾಲ್ಯದ ಬಾಲವನ್ನು ಶಾಶ್ವತವಾಗಿ ಕತ್ತರಿಸಿದ್ದೇನೆ,
ಹಾಗೇ ಮುಗ್ಧತೆಯ ಕುರುಡು ಕರುಳನ್ನು  ಕೂಡಾ. 
ಆದರೆ ಇದರಿಂದ ನನಗೆ ಸಿಕ್ಕಿದಾದರೂ ಏನು, ಇನ್ನಷ್ಟು ದುಃಖ. 
ನನ್ನದೇ ಪುಟ್ಟ ಪ್ರಪಂಚದಲ್ಲಿ ನನಗೆ ಇನ್ನೂ ಕಂಡೇ ಇಲ್ಲ 
ಕ್ರಿಕೆಟ್ ಕ್ಯಾಪ್ ತೊಟ್ಟ ಮುಖ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)