ಎಲ್ಲಿ ಮುಗಿಯುವುದೋ ಕಾಲ್ದಾರಿ

 ಮೂಲ ಕವಿತೆ: ಶೆಲ್ ಸಿಲ್ವರ್ಸ್ಟೀನ್

ಅನುವಾದ : ಸಿ. ಪಿ. ರವಿಕುಮಾರ್



ಎಲ್ಲಿ ಮುಗಿಯುವುದೋ ಕಾಲ್ದಾರಿ 
ಮತ್ತು ಎಲ್ಲಿ ಮೊದಲಾಗುವುದೋ ಹೆದ್ದಾರಿ
ಬೆಳೆವುದು ಮಕಮಲ್ ಹುಲ್ಲು ಅವುಗಳ ನಡುವಣ ಸ್ಥಳದಲ್ಲಿ
ಸೂರ್ಯನು ಕೆಂಪಗೆ ಬೆಳಗುವನು ಆ ಸ್ಥಳದಲ್ಲಿ
ಅಲ್ಲಿ ಸುಳಿದಾಡುವ ಮಲ್ಲಿಗೆಯ ಗಾಳಿಯಲ್ಲಿ 
ಚಕ್ರವಾಕವು ನಿಂತು ದಣಿವಾರಿಸಿಕೊಳ್ಳುವುದು.

ಕಪ್ಪು ಹೊಗೆ ಬುಸುಗುಡುವ ಈ ಸ್ಥಳವನ್ನು ಬಿಟ್ಟು
ಹಾವಿನಂತೆ ಸುತ್ತುವ ಕತ್ತಲುದಾರಿಯನ್ನು ತೊರೆದು
ಸಿಮೆಂಟ್ ಹೂಗಳು ಬೆಳೆವ ಹಳ್ಳಕೊಳ್ಳಗಳ ದಾಟಿ
ನಡೆಯೋಣ ಮೆಲ್ಲಮೆಲ್ಲಗೆ ಹೆಜ್ಜೆಗಳನ್ನು ಊರುತ್ತಾ ಅಳೆದು
ಗಮನಿಸುತ್ತಾ ಯಾವ ದಿಕ್ಕಿನ ಕಡೆಗೆ ಬೆರಳನ್ನು
ತೋರುತ್ತಿವೆ  ಬಿಳಿ ಸೀಮೆಸುಣ್ಣದ ಬಾಣಗಳು
ಕಾಲ್ದಾರಿ ಕೊನೆಗೊಳ್ಳುವ ಸ್ಥಳದ ಕಡೆಗೆ.

ಹೌದು, ನಡೆವೆವು ನಾವು 
ಹೆಜ್ಜೆಗಳನ್ನು  ಅಳೆದು ಇಡುತ್ತಾ ಮೆಲ್ಲಗೆ
ಹೋಗುವೆವು ಬಿಳಿ ಸೀಮೆಸುಣ್ಣದ ಗೆರೆಗಳು ಹೋಗುವ ಕಡೆಗೆ
ಏಕೆಂದರೆ ಮಕ್ಕಳು ಎಳೆಯುವರು ಗೆರೆ
ಏಕೆಂದರೆ ಮಕ್ಕಳಿಗೆ ಗೊತ್ತು 
ಎಲ್ಲಿ ಮುಗಿಯುವುದೋ ಕಾಲ್ದಾರಿ ಎಂದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)