ನನ್ನನ್ನು ಕೇಳು

 ಮೂಲ: ವಿಲಿಯಂ ಸ್ಟಾಫರ್ಡ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನದಿಯು ಹಿಮಗಡ್ಡೆಯಾಗಿ ಬದಲಾದಾಗ ಎಂದಾದರೂ ನೀನು
ಕೇಳು ಏನೇನು ತಪ್ಪುಗಳನ್ನು ಮಾಡಿರುವೆ ನಾನು.
ಕೇಳು ನಾನು ಮಾಡಿದ್ದೆಲ್ಲವೂ ಕೂಡಿ  ನನ್ನ ಬದುಕಾಯಿತೇ ಎಂದು.
ನುಸುಳಿ ಬಂದಿದ್ದಾರೆ ಮೆಲ್ಲನೆ ನನ್ನ ಆಲೋಚನೆಗಳಲ್ಲಿ ಹಲವರು
ಕೆಲವರು ನೋಯಿಸಲು, ಕೆಲವರು ನೆರವಾಗಲು:
ಕೇಳು ಅವರ ಕಡುದ್ವೇಷ ಮತ್ತು ಉತ್ಕಟಪ್ರೇಮ
ಬೀರಿವೆಯೇ ಏನಾದರೂ ಪರಿಣಾಮ.


ನೀನು ಹೇಳಿದ್ದನ್ನು ಕೇಳಿಸಿಕೊಳ್ಳುವೆ ನಾನು.
ನೀನು ಮತ್ತು ನಾನು ಇಬ್ಬರೂ ತಿರುಗಿ ನೋಡೋಣ
ಮೌನವಾಗಿರುವ ನದಿಯ ಕಡೆಗೆ ಮತ್ತು ಕಾಯೋಣ.
ನಮಗೆ ಗೊತ್ತು ಅಲ್ಲಿ ಗುಪ್ತ ಹರಿವಿದೆ ಎಂದು. 
ಮೈಲುಗಟ್ಟಲೆ ದೂರದಲ್ಲಿ ನಡೆವ ಆಗುಹೋಗುಗಳು
ಹಿಡಿದಿಡುತ್ತವೆ ಯಥಾವತ್ ಮುಂದಿನ ಅಚಲತೆ.
ನದಿಯು ಏನು ಹೇಳುತ್ತದೋ ನನ್ನ ಉತ್ತರವೂ ಅದೇ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)