ಶಿಶಿರಗಾನ

 
ಮೂಲ: ಸರೋಜಿನಿ ನಾಯ್ಡು
ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ದುಃಖಿಸುವ ಹೃದಯದೊಳಿರುವ ಒಂಟಿ ಸಂತಸದಂತೆ
ಸಿಕ್ಕಿಸಿದೆ  ಮೋಡದ ಮೇಲೆ ಸೂರ್ಯಾಸ್ತ;
ಸುಕ್ಕು ತರಗೆಲೆ  ಕೆಳಗುದುರಿ ಚಿನ್ನದ ರೇಕುಗಳಂತೆ 
ಸಿಕ್ಕಿ ಬಿರುಗಾಳಿಗೆ ಮೇಲೆದ್ದು ಅಸ್ತವ್ಯಸ್ತ,
ರೆಕ್ಕೆ ಬಂದಂತೆ ಹಾರುತ್ತಿವೆ ಸುತ್ತಮುತ್ತ.

ಕರೆಯುತ್ತಿಹರು ದೂರದಲ್ಲಾರೋ ಕೇಳಿಸಿತೇ!
ಯಾರವರು ಕೂಗುವರು ಗಾಳಿಯ ದನಿಯಲ್ಲಿ?
ಬರಿದಾಗಿದೆ ಹೃದಯ, ತುಂಬುತ್ತಿದೆ ಖಿನ್ನತೆ
ತರಗೆಲೆಯಂತೆ ಉದುರಿ ಕನಸುಗಳು, ಒಣಬಳ್ಳಿ
ಮರುಗುತ್ತಿದೆ ನಾನೇಕಿನ್ನೂ ನಿಂತಿರುವೆನಿಲ್ಲಿ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)