ಮುಖಾಮುಖಿ
ಮೂಲ: ಥಾಮಸ್ ಹಾರ್ಡಿ
ಅನುವಾದ: ಸಿ. ಪಿ. ರವಿಕುಮಾರ್
ಯಾವುದೋ ಪುರಾತನ ತಂಗುದಾಣದಲ್ಲಿ
ಮುಖಾಮುಖಿಯಾಗಿದ್ದಿದ್ದರೆ ನಾವಿಬ್ಬರೂ
ಕುಳಿತು ಎದುರುಬದುರು ಖಂಡಿತಾ
ಹೀರುತ್ತಿದ್ದೆವು ಹೂಜಿ ಒಂದಲ್ಲ ಎರಡು!
ಮುಖಾಮುಖಿಯಾಗಿದ್ದಿದ್ದರೆ ನಾವಿಬ್ಬರೂ
ಕುಳಿತು ಎದುರುಬದುರು ಖಂಡಿತಾ
ಹೀರುತ್ತಿದ್ದೆವು ಹೂಜಿ ಒಂದಲ್ಲ ಎರಡು!
ಆದರೆ ನಾವಿಬ್ಬರೂ ಭೇಟಿಯಾದಾಗ ನಾನು
ತೊಟ್ಟಿದ್ದೆನು ಸೈನಿಕನ ಉಡುಪು, ಬಂದೂಕು;
ಹಾರಿಸಿದೆವು ಇಬ್ಬರೂ ಗುಂಡು ಪರಸ್ಪರರತ್ತ
ನನ್ನ ನಿಶಾನೆಗೆ ಬಲಿಯಾಯ್ತು ಅವನ ಬದುಕು.
ನಾನೇಕೆ ಕೊಂದೆ ಅವನನ್ನು, ಏಕೆಂದರೆ -
ಏಕೆಂದರೆ ಅವನು ನನ್ನ ಶತ್ರುವಾಗಿದ್ದ
ಅಷ್ಟೇ ಕಾರಣ: ಅವನು ಶತ್ರುಪಡೆಯಲ್ಲಿದ್ದ!
ಇದಕ್ಕಿಂತಲೂ ಬೇಕೆ ಕಾರಣ ಶತಸಿದ್ಧ?
ಸೈನ್ಯ ಸೇರಲು ಅವನು ಏನಿರಬಹುದು ಕಾರಣ?
ಬೇರೇನು ಇದ್ದೀತು? ನನ್ನಂತೆಯೇ ಅವನು
ಕೆಲಸ ಇಲ್ಲದೆ ಇದ್ದಬದ್ದದ್ದೆಲ್ಲಾ ಮಾರಿ
ಬರೆಸಿಕೊಂಡಿರಬಹುದು ತನ್ನ ಹೆಸರನ್ನು.
ಯುದ್ಧವೆಂದರೆ ಅರ್ಥವಾಗದ ವಿಚಿತ್ರ!
ಹೊಡೆದು ಕೊಲ್ಲುವಿರಿ ಎದುರಾಳಿಯನ್ನು
ಯಾವ ಎದುರಾಳಿ ಎದುರಾದರೆ ಮಧುಶಾಲೆಯಲ್ಲಿ
ತಣಿಸುವಿರೋ ದಾಹ ತೆತ್ತು ನಿಮ್ಮ ಹೊನ್ನು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ