ಇಲ್ಲಿ ಯುದ್ಧವು ಸರಳ

 ಮೂಲ: ಡಬ್ಲ್ಯು. ಎಚ್. ಆಡೆನ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್






ಯುದ್ಧವು ಇಲ್ಲಿ ಸ್ಮಾರಕದಷ್ಟೇ ಸರಳ:
ಟೆಲಿಫೋನ್ ಮಾತಾಡುತ್ತಿದೆ ಒಬ್ಬ  ಮನುಷ್ಯನ ಜೊತೆ
ಭೂಪಟದ ಮೇಲೆ ಜೋಡಿಸಿದ ಬಾವುಟಗಳು
ಹೇಳುತ್ತವೆ ತುಕಡಿಗಳನ್ನು ಕಳಿಸಿದ ಕತೆ
ಹುಡುಗನೊಬ್ಬ ತರುತ್ತಾನೆ ಬಟ್ಟಲುಗಳಲ್ಲಿ ಹಾಲು
ಯೋಜನೆಯೊಂದು ಪಡೆಯುತ್ತಿದೆ ಕಾಲು -

ಬದುಕಿ ಉಳಿದವರಿಗಾಗಿ.  ಸಾವಿನ 
ಭಯದಲ್ಲಿ ಬದುಕು ನೂಕುತ್ತಿರುವ ಜನ,
ಒಂಬತ್ತಕ್ಕೇ ಬಾಯಾರಿ ಚಡಪಡಿಸುವರು
ಹನ್ನೆರಡಕ್ಕೆ ಬಾಯಾರಬೇಕಾದವರು.
ಕಳೆದು ಹೋಗಬಲ್ಲವರು.
ಕಳೆದು ಹೋದವರು.
ಹೆಂಡತಿಯರನ್ನು ನೆನೆದು ಪರಿತಪಿಸುವವರು.
ಆಲೋಚನೆಗಿಂತಲೂ ಬೇಗ ಸಾಯುವವರು.

ಆಲೋಚನೆಯೊಂದು ಸತ್ಯವೇ ಆಗಿರಬಹುದು
ಮಾನವರು ತೆತ್ತರೂ ಜೀವದ ಬೆಲೆ
ಮತ್ತು ಗಮನಿಸಿದರೆ ಕಾಣುವುದು ಒಂದು ಸುಳ್ಳು
ಸೂಸುವುದು ಹೇಗೆ ಬೆಳಕನ್ನು ಸಹಸ್ರ ಮುಖಗಳ ಮೇಲೆ.

ಭೂಪಟಗಳು ತೋರಬಲ್ಲವು ಎಲ್ಲೆಲ್ಲಿ ಕೇಡಾಗಿದೆ ಬದುಕು:
ನ್ಯಾನ್ ಕಿಂಗ್ ಮತ್ತು ಡಾಶೌ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)