ವನಸುಮ

ವನಸುಮ



ಮೂಲ: ರಾಲ್ಫ್ ವಾಲ್ಡೋ ಎಮರ್ಸನ್

ಅನುವಾದ: ಸಿ.ಪಿ. ರವಿಕುಮಾರ್

ನನ್ನೆದೆಯ ಶಾಂತಿಯನ್ನು ಕದಡಿದಾಗ ಮೇ ತಿಂಗಳ ಕಡಲುಗಾಳಿ

ಕಣ್ಣಿಗೆ ಬಿತ್ತು ಹೊಸದಾಗಿ ಅರಳಿದ ರೊಡೋರಾ ಕಾಡಿನಲ್ಲಿ,
ಎಲೆಗಳೇ ಇಲ್ಲ, ದಳಗಳೇ ಎಲ್ಲಾ, ಅರಳಿದೆ ತೇವವುಳ್ಳ ಮೂಲೆಯಲ್ಲಿ,
ಯಾರನ್ನು ಮೆಚ್ಚಿಸಲು? ಮೆಲ್ಲನೆ ಹರಿವ ತೊರೆಯೊಂದೇ ನಿರ್ಜನ ವನದಲ್ಲಿ.
ಕೆನ್ನೀಲಿ ಬಣ್ಣದ ಹೂದಳಗಳು ಉದುರಿ ಕೆಳಗೆ ಬಿದ್ದಿವೆ,
ಕಡುಗಪ್ಪು ನೀರಿಗೆ ತಂದಿತ್ತಿವೆ ಅಪೂರ್ವ ಶೋಭೆ,
ದಾಹ ತಣಿಸಲು ಇಲ್ಲಿಗೆ ಬಂದ ಕೆಂಪು ಹಕ್ಕಿಯ ಪುಕ್ಕ
ಶ್ರೀಮಂತಿಕೆಯನ್ನು ಕಳೆದುಕೊಳ್ಳದೇ ಹೂವಿನ ಪಕ್ಕ?
ರೊಡೋರಾ! ಕೇಳಿದರೆ ನಿನ್ನನ್ನು ಯಾರಾದರೂ  ವಿವೇಕಮತಿಗಳು 
ಹೀಗೇಕೆ ವ್ಯರ್ಥವಾಗಿದೆ ನಿನ್ನ  ಚೆಲುವೆಂದು ಹೀಗೆ ಹೇಳು:
ನೋಡುವ ಕೆಲಸ ಕೊಟ್ಟಿದೆಯೋ ಹೇಗೆ ಸೃಷ್ಟಿ ಕಂಗಳಿಗೆ
ಚೆಲುವಾಗಿರುವ ಕೆಲಸ ಕೊಟ್ಟಿದೆ ಚೆಲ್ವಿಕೆಗೆ ಹಾಗೇ.
ಅಂದೇಕೆ ನೀನು ನನ್ನ ಕಣ್ಣಿಗೆ ಬಿದ್ದೆ? ತಿಳಿಯದೆ ಬುದ್ಧಿ
ಕೇಳಲು ಮರೆತೆನಲ್ಲ  ಓ ಗುಲಾಬಿಯ ಪ್ರತಿಸ್ಪರ್ಧಿ!
ನನ್ನ ಅಲ್ಪಮತಿಗೆ ತೋರುವುದು ಇಷ್ಟೇ: ನನ್ನನ್ನು ಅಲ್ಲಿಗೆ 
ಕೊಂಡೊಯ್ದ ಶಕ್ತಿಯೇ ನಿನ್ನನ್ನು ಕರೆತಂದಿರಬಹುದು ಇಲ್ಲಿಗೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)