ಯಾರದು ಈ ಕೋಣೆ?
ಯಾರದು ಈ ಕೋಣೆ?
ಮೂಲ: ಶೆಲ್ ಸಿಲ್ವರ್ಸ್ಟೀನ್
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್
ಯಾರದ್ದು ಈ ಕೋಣೆ? ಅವರಿಗೆ ನಾಚಿಕೆಯಾಗಬೇಕು
ಒಳಉಡುಪು ನೇತುಹಾಕಿದೆ ಎಲೆಕ್ಟ್ರಿಕ್ ದೀಪಕ್ಕೆ
ಮಳೆಕೋಟು ಮೂರ್ಛೆ ಹೋಗಿದೆ ಸೋಫಾ ಮೇಲೆ ಶಾಪಕ್ಕೆ
ಸೋಫಾ ಮೇಲೆ ತೇವಕ್ಕೆ ಹತ್ತಿಕೊಂಡಿದೆ ಜೌಗು.
ಸಿಕ್ಕಿಸಿದ್ದಾರೆ ಕಿಟಕಿ ಸರಳಿನಲ್ಲಿ ನೋಟ್ ಪುಸ್ತಕ
ಸ್ವೆಟರ್ ಬಿದ್ದಿದೆ ನೆಲದ ಮೇಲೆ ಅನಾಥ
ಟೊಪ್ಪಿಗೆ ಮಲಗಿದೆ ಟಿವಿ ಕೆಳಗೆ ಅಂಗಾತ
ಜೋತಾಡುತ್ತಿದೆ ಬಾಗಿಲಿಗೆ ಪ್ಯಾಂಟ್ ತಳಪಳಕ.
ಹೇಗೆ ಉಗ್ರಾಣದಲ್ಲಿ ಪುಸ್ತಕಗಳನ್ನು ತುರುಕಿದ್ದಾನೆ
ನೆಲದ ಮೇಲೆಲ್ಲಾ ಬಿದ್ದಿವೆ ವಸ್ತು ಚೆಲ್ಲಾಪಿಲ್ಲಿ
ಹಾಸಿಗೆಯ ಮೇಲೆ ನಿದ್ರಿಸುತ್ತಿದೆ ಒಂದು ಹಲ್ಲಿ
ಗೋಡೆಗಂಟಿಸಿದ ಕಾಲುಚೀಲಕ್ಕೆ ಗಬ್ಬು ವಾಸನೆ!
ಯಾರದು ಈ ಕೋಣೆ? ಅವರಿಗೆ ನಾಚಿಕೆಯಾಗಬೇಕು
ಶಾಮನದೇ? ಗೋಪಿಯದೇ? ಅಥವಾ ...
ಏನು? ಇದು ನನ್ನದೇ ಕೋಣೆಯೇ? ದೇವಾ!
ಹೌದಲ್ಲ, ಎಲ್ಲೋ ನೋಡಿದಂತೆ ನೆನಪು ಮಸುಕುಮಸುಕು.
ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಇರೋ ನನಗೆ ಸಿಲ್ವರ್ಸ್ಟೀನ್ ತುಂಬಾ ಇಷ್ಟ - ಕಾಪಿ ರೈಟ್ ಸಮಸ್ಯೆಯಿಂದ ಮುಂದುವರಿದಿಲ್ಲ, ಆದರೆ ಅವರ where the side walk ends ಕುರಿತ ಲೇಖನದಲ್ಲಿ ಕೆಲವೆಲ್ಲ ಕನ್ನಡಕ್ಕೆ ತಂದಕೊಂಡಿದೀನಿ, ನಿಮ್ಮ ಅನುವಾದ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು!
ಪ್ರತ್ಯುತ್ತರಅಳಿಸಿ