ಜೀವನ

 ಜೀವನ
ಮೂಲ ಕವಿತೆ: ಹೆನ್ರಿ ವ್ಯಾನ್ ಡೈಕ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್




ವರುಷದಿಂದ ವರುಷಕ್ಕೆ ಬದುಕಬಯಸುವುದೆನ್ನ ಚಿತ್ತ
ಸದಾ ಮುಂದಕ್ಕೆ ನೋಡುತ್ತಾ, ಆತ್ಮ ಪಶ್ಚಾತ್ತಾಪರಹಿತ,
ಮುನ್ನುಗ್ಗದೇ ಗುರಿಯತ್ತ, ಗುರಿಯಿಂದ ಎಂದೂ ಆಗದೆ ವಿಮುಖ,
ಭೂತದ ಕತ್ತಲಲ್ಲಿ ಕಳೆದುಹೋದದ್ದಕ್ಕೆ ಪಡದೆ ದುಃಖ,
ಮೇಲೇಳುವ ಮುನ್ನವೇ ಭವಿಷ್ಯದ ಪರದೆ
ಮುಂದೇನು ಎಂದು ಇಂದೇ ಭೀತನಾಗಿರದೆ,
ಸಂತಸದಿಂದ  ಕಟ್ಟುತ್ತಾ ವಯೋಮಾನಕ್ಕೆ ತೆರಬೇಕಾದ ತೆರಿಗೆ
ಲಗುಬಗೆಯ ಹೆಜ್ಜೆ ಇಡುತ್ತಾ ಬರುವ ವರುಷದ ಕಡೆಗೆ.


ಮೇಲ್ಮುಖವೋ ನತಶಿರವೋ ಮುಂದಿರುವ ಪಥ 
ಒರಟೋ ನಯವೋ! ಪಯಣ ಹೇಗಿದ್ದರೂ ಸುಖ!
ಹುಡುಕುತ್ತ ಸಾಗುವೆ ನಾನು ಬಾಲ್ಯದಿಂದಲೂ ಬಯಸಿದ್ದನ್ನೇ,
ಹೊಸಮೈತ್ರಿ, ಉತ್ತುಂಗ ಸಾಹಸ, ಮತ್ತೊಂದು ಮುಕುಟ!
ಹುಡುಕಾಟದ ಕೆಚ್ಚು  ಹೃದಯದಲ್ಲಿರುವುದು ಎಂದೆಂದಿಗೂ.
ಆಶಿಸುವೆ ಅತ್ಯುತ್ತಮವಾಗಿರಲಿ ಪಯಣದ ಕೊನೆಯ ತಿರುವು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)