ಭದ್ರತೆ

ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್ 
ಕನ್ನಡಕ್ಕೆ: ಸಿ. ಪಿ. ರವಿಕುಮಾರ್




ನಾಳೆಗೆ ಇರುವುದೊಂದು ದ್ವೀಪ.  ಸಿಕ್ಕುವುದು ನನಗೆ ಇರುಳು
ಇಳಿಯುವ ಮುನ್ನವೇ, ಎಂದಿನಂತೆ. ತದನಂತರ ಹೊರಡುವೆ ಮತ್ತೊಂದನ್ನು ಅರಸಿ. ಈ
ಸ್ಥಳಗಳು ಹಗಲಿನಲ್ಲಿ ಅಡಗಿಕೊಂಡಿರುತ್ತವೆ. ಕರೆದರೆ ಓಗೊಟ್ಟು ಬರುತ್ತವೆ
ಕಳಚಿಕೊಂಡು. ಅವುಗಳ ಇರುವಿನ ಅರಿವು ಇರಬೇಕು ಅಷ್ಟೇ, ಅವು ಹುಟ್ಟುವ ಮುನ್ನವೇ.

ಮುಂದೆ ಎಂದಾದರೂ ಬರಬಹುದೊಂದು ಯಾವ ದ್ವೀಪವೂ ಇಲ್ಲದ ನಾಳೆ
ಇಂದಿನವರೆಗೂ ನಾನು ಹಾಗಾಗಲು ಬಿಟ್ಟಿಲ್ಲ. ಆದರೆ ನನ್ನ ತರುವಾಯ
ಉಳಿದವರು ಬೆಳೆಸಿಕೊಳ್ಳಬಹುದು ಅಪನಂಬಿಕೆ ಮತ್ತು ಅಜಾಗರೂಕತೆ.
ಅವರ ಮುಂದೆ ಭೋರ್ಗರೆಯುವುದು ವಿಶಾಲ ಅವಿಚ್ಛಿನ್ನ ಸಮುದ್ರ.
ನೋಡುತ್ತಾ ನಿಲ್ಲುವರು ನೆಟ್ಟು ದಿಗಂತದತ್ತ ದೃಷ್ಟಿ ಅಭದ್ರ.

ಹೀಗಾಗಿ, ಗೆಳೆಯಾ, ನಿನ್ನಲ್ಲಿ ನಾನು ಹೇಳಿಬಿಡುವೆ ನನ್ನ ರಹಸ್ಯ:
ಶೋಧಕನಾಗಲು ನಿನಗೆ ಬೇಕಾದದ್ದು ಭದ್ರವಾಗಿ ಹಿಡಿದುಕೊಳ್ಳುವುದು
ಸಿಕ್ಕಿದ್ದನ್ನು. ಅದೇನೆಂದು ನಿರ್ಧರಿಸಿ ಕಾಲಾಂತರದಲ್ಲಿ ಅನಂತರ
ನೀನು ತೆರಳಿದ ಸ್ಥಳದ ಮೇಲೆ ಊರಿ ಭದ್ರವಾಗಿ ಕಾಲು
ತೆರೆದ ಕಡಲಿನ ಕಡೆಗೆ ನೋಡಿ ಕೈ ಬಿಟ್ಟು ನಿಲ್ಲು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)