ನೀಲಿಹಕ್ಕಿ
ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ
ಕನ್ನಡ ಅನುವಾದ: ಸಿ ಪಿ ರವಿಕುಮಾರ್
ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ
ಹೊರಬರಲು ಅದಕ್ಕೆ ತವಕ
ನಾನು ಅವನಿಗಿಂತ ಬಲಿಷ್ಠ
ಸೆರೆ ಹಿಡಿದಿಟ್ಟಿರುವೆ
ಇದ್ದಲ್ಲೇ ಇರು ಎಂದು ಗದರಿಸುವೆ
ಯಾರಿಗೂ ತಿಳಿಯಕೂಡದು ನೀನಿಲ್ಲಿ ಇರುವ ವಿಷಯ.
ಹೊರಬರಲು ಅದಕ್ಕೆ ತವಕ
ನಾನು ಅವನಿಗಿಂತ ಬಲಿಷ್ಠ
ಸೆರೆ ಹಿಡಿದಿಟ್ಟಿರುವೆ
ಇದ್ದಲ್ಲೇ ಇರು ಎಂದು ಗದರಿಸುವೆ
ಯಾರಿಗೂ ತಿಳಿಯಕೂಡದು ನೀನಿಲ್ಲಿ ಇರುವ ವಿಷಯ.
ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ
ಹೊರಬರಲು ಅದಕ್ಕೆ ತವಕ
ಅವನ ಮೇಲೆ ವ್ಹಿಸ್ಕಿ ಸುರಿದು
ನಾನು ಎಳೆದುಕೊಳ್ಳುವೆ ಸಿಗರೆಟ್ ದಮ್ಮು.
ವೇಶ್ಯೆಯರಿಗೆ, ಬಾರಿನಲ್ಲಿ ಮದ್ಯ ಸುರಿದು ಕೊಡುವವರಿಗೆ,
ಕಿರಾಣಿ ಅಂಗಡಿಯ ಕಾರಕೂನರಿಗೆ
ಯಾರಿಗೂ ತಿಳಿಯದು ನೀಲಿಹಕ್ಕಿಯ ವಿಷಯ.
ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ
ಹೊರಬರಲು ಅದಕ್ಕೆ ತವಕ
ನಾನು ಅವನಿಗಿಂತ ಬಲಿಷ್ಠ
ಸೆರೆ ಹಿಡಿದಿಟ್ಟಿರುವೆ
ಅವನನ್ನು ಕೇಳುವೆ
ನನ್ನನ್ನು ಹಾಳು ಮಾಡುವುದು ನಿನ್ನ ಉದ್ದೇಶವೇ?
ಯೂರೋಪ್ ದೇಶದಲ್ಲಿ ನನ್ನ ಪುಸ್ತಕ ಮಾರಾಟ
ಠಪ್ ಎನ್ನಿಸಿಬಿಡುತ್ತೀಯೋ ಹೇಗೆ?
ನನ್ನ ಹೃದಯದಲ್ಲಿದೆ ಒಂದು ನೀಲಿ ಹಕ್ಕಿ
ಹೊರಬರಲು ಅದಕ್ಕೆ ತವಕ
ನಾನು ಅವನಿಗಿಂತ ಕಿಲಾಡಿ
ರಾತ್ರಿ ಎಲ್ಲರೂ ನಿದ್ರಿಸುವಾಗ ಮಾತ್ರ
ಕೆಲವೊಮ್ಮೆ ಹೊರಬರಲು ಬಿಡುವೆ.
ದುಃಖಿಸಬೇಡ
ಅಲ್ಲಿ ನೀನಿರುವುದು ನನಗೆ ಗೊತ್ತು
ಎನ್ನುತ್ತಾ ಮತ್ತೆ ಒಳಕ್ಕೆ ಸೇರಿಸುವೆ.
ಅವನು ಅಲ್ಲಿ ಒಳಗೆ
ಏನೋ ಹಾಡುತ್ತಿದ್ದಾನೆ. ಅವನನ್ನು
ನಾನು ಸಾಯಲು ಬಿಟ್ಟಿಲ್ಲ.
ನಾವು ಹೀಗೆ ಮಲಗುತ್ತೇವೆ ಒಟ್ಟಿಗೆ
ನಮ್ಮ ರಹಸ್ಯ ಒಪ್ಪಂದ
ಯಾರಿಗಾದರೂ ತರಿಸಬಹುದು ಕಣ್ಣೀರು.
ನಾನಂತೂ ಅಳುವುದಿಲ್ಲ
ನೀವು ಹೇಗೋ ಗೊತ್ತಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ