ಬೀದಿಗೆ ಚಂದ್ರಮ ಮತ್ತಿತರ ಹನಿಗವನಗಳು

ನೋಟ

ಚುನಾವಣಾ ಕಣದಲ್ಲಿ ಇಳಿದಿದ್ದರು ಆತ
ಏಟೀಎಮ್ಮಿನಂತೆ ಹಂಚಿದರು ತಲಾ ಸಾವಿರದ ನೋಟ
ಜಾಣ ಮತದಾರನ ಕಣ್ಣಿಗೆ ಇಂಪಾದ ನೋಟ
ಈವೀಎಮ್ಮಿನಲಿ ಆದರೂ ಒತ್ತಿದನು ನೋಟಾ.


ನ್ಯಾನ್ಸಿ

ಹಿಂದೊಮ್ಮೆ ಅವನೊಬ್ಬ ಪ್ರೇಮರೋಗಿ
ಒದ್ದಾಡುತ್ತಿದ್ದ ಮಿಸ್. ನ್ಯಾನ್ಸಿಗಾಗಿ
ಓಕೆ ಎಂದಳು ನ್ಯಾನ್ಸಿ
ಮದುವೆಯೋ ಬಹು ಫ್ಯಾನ್ಸಿ
ಈಗ ಒದ್ದಾಡುತ್ತಾನೆ ಫೈ-ನ್ಯಾನ್ಸಿಗಾಗಿ



ವಿವೇಕ

ಅರೈಸ್ ಅವೇಕ್ ಎಂದು ಎಬ್ಬಿಸಿದಂತೆ
ಹಿಂದೊಮ್ಮೆ ಶ್ರೀ ವಿವೇಕಾನಂದ
ಹಾಸ್ಟೆಲ್ ಹುಡುಗರನ್ನು ಎಬ್ಬಿಸುವ ವಾರ್ಡನ್
ಹುಡುಗರ ಬಾಯಲ್ಲಿ ಅವೇಕಾನಂದ

ಬೀದಿಗೆ ಚಂದ್ರಮ

"ಬಿದಿಗೆ ಚಂದ್ರಮ ಡೊಂಕು"
ಎಂದು ಬರೆದರು ಅಂಬಿಕಾತನಯದತ್ತ
ಬೀದಿಗೆ ಚಂದ್ರಮ ಡೊಂಕು
ಎಂದು ಟೈಪಿಸಿದನು ಟೈಪಿಸ್ಟನು ಇತ್ತ
ಬಿದ್ದಾಗ ಚಂದ್ರಮ ಬಾನಿಂದ ಬೀದಿಗೇ
ಯಾರಪ್ಪಾ ವಾಪಸ್ ಏರಿಸೋರು ಬಾನಿಗೆ?

ಕ.ಬು.

ಹಿಂದೆ
ಕವಿಗೂ ಸಂಪಾದಕನಿಗೂ
ಇರುತ್ತಿತ್ತು
ಕನಿಷ್ಠ ವಿಷಾದಪತ್ರದ ಕನೆಕ್ಷನ್ನು
ಇದು
ಅದೂ ಇಲ್ಲವಾಗಿದೆ
ಇರುವುದೊಂದೇ
ರೀಸೈಕಲ್ ಬಿನ್ನು







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)