ಶ್ರೀ ರಸ್ತಾ ಸ್ತೋತ್ರಂ
(ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳ ಮೇಲೆ ಓಡಾಡುವ ಅನುಭವದಿಂದ ಪ್ರೇರಿತ)
ಎಲೈ ರಸ್ತೆ, ನಾದುರಸ್ತೆ, ನಗರ ಜೀವನಾವ್ಯವಸ್ಥೆ, ನಮೋಸ್ತುತೆ!
ಪಾಟ್ ಗುಂಡಿ ವಿರಾಜಿತೆ, ವಾಯುವಜ್ರ ಸಂಪೂಜಿತೆ, ನಮೋಸ್ತುತೆ!
ಸಿಮೆಂಟ್ ಟಾರ್ ವಂಚಿತೆ ನಿತ್ಯವಾರುಣ ಸಿಂ'ಚಿತೆ, ನಮೋಸ್ತುತೆ!
ಹಂಪುಶೈಲವಿಹಾರಿಣಿ, ಅಮೃತಾಂಜನದಾಯಿನಿ, ನಮೋಸ್ತುತೆ!
ಕಾಳಮುಖಿಶ್ರೀಭೈರವಿ ಕೈಗಳಂ ಮುಗಿವ ರವಿ, ಕಾಪಾಡು ಶ್ರೀಮಾತೆ, ನಮೋಸ್ತುತೆ!
ಸೇಲಿಹುದು ಮಾಲಿನಲಿ, ತಲುಪಿಸೈ ವೇಗದಲಿ, ನೆರೆನಂಬಿ ಬಂದಿಹೆನು, ನಮೋಸ್ತುತೆ!
ಇತಿ ಶ್ರೀ ರಸ್ತಾ ಸ್ತೋತ್ರಂ ಸಂಪೂರ್ಣಂ
ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ