ಆರು ಹಿತವರು ನಿನಗೆ

ಧರ್ಮ, ರಾಜಕಾರಣ ಮತ್ತು ಸಾಹಿತ್ಯ
ಬೆರೆಸಿ ಯಾವುದೇ ಎರಡನ್ನು ತಯಾರಿಸಬಹುದು
ವ್ಯಂಜನ ಆರು -
ಧರ್ಮಸಾಹಿತ್ಯ
ಸಾಹಿತ್ಯಧರ್ಮ
ಧರ್ಮರಾಜಕಾರಣ
ರಾಜಕಾರಣಧರ್ಮ
ಸಾಹಿತ್ಯರಾಜಕಾರಣ
ರಾಜಕಾರಣಸಾಹಿತ್ಯ
ಕೆಲವು ಸಿಹಿ, ಕೆಲವು ಹುಳಿ
ಕೆಲವು ವಿಷಕಾರಿ, ಹುಷಾರು!
ಇನ್ನು ಬೆರೆಸಿ ಮೂರನ್ನೂ ಸಿಕ್ಕುವ ಆರು
ಅವುಗಳಿಂದ ನಮ್ಮನ್ನು ರಕ್ಷಿಸುವವರಾರು!
ಸಿ. ಪಿ. ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ