ವೃತ್ತಪತ್ರಿಕೆ ಮತ್ತಿತರ ಹನಿಗವಿತೆಗಳು

ವೃತ್ತಪತ್ರಿಕೆ 

ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ?
ಗುಂಡಗಿನ ಭೂಮಿಯ
ಸ್ತುತ್ತಮುತ್ತಲಿಂದ ಗ್ರಹಿಸಿರುವೆ ಸುದ್ದಿ
ನಮ್ಮ ತಲೆ ತಿನ್ನುತ್ತಾ
ಸಾಕಷ್ಟು ಬೆಳೆದಿರಬೇಕು ನಿನ್ನ ಬುದ್ಧಿ
ನಿನಗೆ ಜಾಮೆಟ್ರೀ ಹೇಳಿಕೊಡಬೇಕೆ?
ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ?


ನಿರ್ಮಮ  

ನಾ, ಮಮ ಎಲ್ಲವನ್ನೂ ಬಿಟ್ಟು ಬಿಡಿ ಎಂದು 
ಗುರುಗಳು ಉಪನ್ಯಾಸ ನೀಡಿದರು ಎಂದು 
ಅವರ ಶಿಷ್ಯರೆಲ್ಲರೂ ಯೋಚಿಸಿ ತ್ಯಜಿಸಿದ್ದಾರೆ 
'ನಾ'ಚಿಕೆ 'ಮಾ'ನ  ಹಾಗೂ 'ಮ'ರ್ಯಾದೆ 
ಹೊರಗೆ 

ಹಿಂದೊಮ್ಮೆ 
ಗುಡಿಚರ್ಚುಮಸೀದಿಗಳನ್ನು 
ಹೊರಗಿಟ್ಟು ಬನ್ನಿ!
ಇಂದು 
ಗುಡಿಚರ್ಚುಮಸೀದಿಗಳ ಹೊರಗೆ :
"ಚಪ್ಪಲಿ 
ಹೊರಗಿಟ್ಟು ಬನ್ನಿ"


ಬಂಗಾರದ ಮನುಷ್ಯ 
ಹಾಲಿವುಡ್ "ಐರನ್ ಮ್ಯಾನ್" ತಯಾರಿಸುವ ಮುನ್ನ
ಕನ್ನಡದಲ್ಲಿ ತಯಾರಿಸಿಬಿಟ್ಟಿದ್ದರು ಬಂಗಾರದ ಮನುಷ್ಯನ್ನ

ಕಿಣಿ 

ಮದುವೆಯಾದಳು ಎಂಬಿಬಿಎಸ್ ಪಡೆದು
ಮಿಸ್. ಮಂದಾಕಿನಿ, ಡಾ. ಕಿಣಿಯನ್ನು ಹಿಡಿದು
ನಡೆಸುತ್ತಾರೆ ಕ್ಲಿನಿಕ್ ದಂಪತಿಗಳು ಇಬ್ಬರೂ  ಸೇರಿ
ಬೋರ್ಡ್ ಬರೆದವನು ಹೀಗೆ ಬರೆಯಬಹುದೆನ್ರೀ
ಅವಳ ಹೆಸರಿನ ಕೆಳಗೆ  "ಶ್ರೀಮತಿ ಡಾ.ಕಿಣಿ"


ವಿಲ್ಲಾ 

ಹಸಿದಾಗ ಕಾಣಿಸಿದ ರೆಸ್ತೊರಾಂ ಹೆಸರು
"ಆಹಾರ್ ವಿಲ್ಲಾ"
"ಸಾರ್ ಇಂದು ಕರೆಂಟ್ ಇಲ್ಲ, ಗೊತ್ತಾತ್ರಾ?
ಮೆನುನಲ್ಲಿ ಬರೀ ಹಸಿ ಸ್ಯಾಲೆಡ್ ಮಾತ್ರ!"
ಎಂದಾಗ ವೇಟರ್ ಮೇಲೆದ್ದು
ಹೊರಟು ಬಂದೆ 
"ಯಾಕೋ ಹಸಿ-ವಿಲ್ಲಾ"


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)