ನಿದ್ರಿಸುವೆ, ನೀ ಹಾಡಿದರೆ!

Sleeping Man and Baby in Close-up Photography
ಮೂಲ ಹಿಂದಿ ... ಹರಿವಂಶರಾಯ್ ಬಚ್ಚನ್
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್
(ಹರಿವಂಶರಾಯ್ ಬಚ್ಚನ್ ಅವರ ಈ ಗೀತೆಯನ್ನು ಆಲಾಪ್ ಹಿಂದಿಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಏಸುದಾಸ್ ಹಾಡಿದ್ದಾರೆ.)

ನಿದ್ರಿಸುವೆ, ನೀ ಹಾಡಿದರೆ!
ಸಂಸ್ಕೃತಿಯ ವಿಶಾಲ ಸಮುದ್ರದೊಳು
ಸುಖದುಃಖದ ಅಲೆಗಳ ಬೀಳೇಳು
ಏರುವೆ ಸ್ವಪ್ಪದ ನೌಕೆಯ ಮಡಿಲು!
ತೇಲುತ ಸಾಗುವೆ ಹಗಲೂ ಇರುಳೂ!
ನಿದ್ರಿಸುವೆ, ನೀ ಹಾಡಿದರೆ!

ಬೀರುತ ನನ್ನೆಡೆ ಪ್ರೇಮದ ನೋಟ
ಹಾಡುತ ಶುಭಹರಕೆಯ ಸಂಗೀತ
ಮಾತೆಯ ಮಮತೆಯ ಮಡಿಲಿನ ಮಾಟ
ಹಣೆ ನೇವರಿಸುವ ಬೆರಳಿನ ಆಟ
ನಿದ್ರಿಸುವೆ, ನೀ ಹಾಡಿದರೆ!

ನನ್ನಯ ಬದುಕಿನ ಕಹಿನಾಟಕವ
ನನ್ನಯ ಜೀವನ ಕಾರ್ಕೋಟಕವ
ಸಿಹಿಗೊಳಿಸುತ ತನ್ನಯ ಗೀತೆಯಲಿ
ಮೆಲ್ಲನೆ ಹಾಡಿದರಿನಿದನಿಯಲ್ಲಿ,
ನಿದ್ರಿಸುವೆ, ನೀ ಹಾಡಿದರೆ!


ಮೂಲ ಹಿಂದಿ ... ಹರಿವಂಶರಾಯ್ ಬಚ್ಚನ್
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)