ಜಗದೋದ್ಧಾರ ಮತ್ತಿತರ ಹನಿಗವನಗಳು

ಜಗದೋದ್ಧಾರ

ಕಂಡ್ ಮುದ್ದೆ ಬೆಣ್ಣೆ ತಿಂತಿದ್ದಾಗ ಒಬ್ನೇ
ಯಾರೋ ಬಂದ್ ಹಾಗ್ ಸದ್ದು!
ಗಾಬ್ರಿಗ್ ಮುದ್ದೆ ಬಿದ್ದು
ಎಳ್ಕೊಂಡ್ ತಿಂತಿದ್ನಂತೆ ಮಣ್ಣೆ!

ಪೂರ್ಣಚಂದ್ರ

ಅಮ್ಮಾ ಚಂದ್ರನ ತೋರುತ್ತಾ
ತಿನಿಸುವೆಯಲ್ಲ ಮೊಸರನ್ನ
ಹುಣ್ಣಿಮೆ ಚಂದ್ರನ ನೋಡುತ್ತಾ
ಪೀಟ್ಸಾ ನೆನಪಾಗುವುದಮ್ಮ!

ಯಾದವ ನೀ ಬಾ

ಯಾದವನೊಬ್ಬ ಕದಿಯುತ್ತಿದ್ದನಂತೆ
ಅಮ್ಮ ಕಡೆದಿಟ್ಟ ಹಸಿಬೆಣ್ಣೆ
ಎಂಥಾ ಕಾಲ ಬಂತು ಮಾರಾಯ
ಮುಂದೊಬ್ಬ ಯಾದವರಾಯ
ಕದ್ದ ಹಸುವಿಗಿಟ್ಟ ಹುಲ್ಲನ್ನೇ!


ಕಾಲಾಯ ತಸ್ಮೈ ನಮಃ

ಎದ್ದಾಗ ಬೆಳಗ್ಗೆ ಆರುಗಂಟೆಗೆ ಅಲಾರಂ ಸದ್ದಿಗೆ
ನಿದ್ರಿಸುತ್ತೇನೆಂದು ಕಣ್ಮುಚ್ಚಿದರೆ ಎರಡು ನಿಮಿಷ
ಮತ್ತೆ ಕಣ್ ಬಿಟ್ಟಾಗ ಗಡಿಯಾರ ನುಡಿಯುವುದು
ಆರೂ ಮುಕ್ಕಾಲೆಂಬ ಸತ್ಯ!
ಮಧ್ಯಾಹ್ನ ಆಫೀಸಿನಲ್ಲಿ ಎರಡೂವರೆಗೆ
ಸುಸ್ತಾಗಿ ಕದ್ದುಮುಚ್ಚಿದರೆ ಕಣ್ಣು ಐದು ನಿಮಿಷ
ಎದ್ದಾಗ ಗಡಿಯಾರ ನುಡಿಯುತ್ತದೆ
'ಇನ್ನೂ ಎರಡೂ ಮೂವತ್ತೊಂದು' ಎಂಬ ಮಿಥ್ಯ!

ಕಿವಿಕಣ್ಣುಬಾಯಿ ಮುಚ್ಚಿಕೋ ಎಂದು ಬಾಪೂಜಿ
ಮೂಗುಮುಚ್ಚಿ ಉಸಿರಾಡು ಎಂದು ಬಾಬಾಜಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)