ಹತ್ತು ಹನಿಗವನಗಳು

Bike Chain Forming 1 and 0

(1)
ತೂತಾಗಿ ಸೋರುತ್ತಿದೆಯೇ ನಿನ್ನ ಅಂಬರೆಲ್ಲಾ?
ತೂತಾಗಿ ಸೋರುತ್ತಿದೆಯಲ್ಲ ಅಂಬರವೆಲ್ಲಾ!


(2)
ಪಟಾಕಿ ಹಚ್ಚುವುದು ನಿಷೇಧವಂತೆ ದೆಹಲಿಯಲ್ಲಿ
ಕೇಳಿ ನಿಷೇಧಿಸುವರೇ ಉತ್ತರ ಕೊರಿಯಾದಲ್ಲಿ?

(3)
ಒಬ್ಬನಿಗೆ ಇದ್ದರಂತೆ ಇಬ್ಬರು ಹೆಂಡಿರು
ಒಬ್ಬಳ ತಲೆಗೂದಲು ಕಪ್ಪು
ಇನ್ನೊಬ್ಬಳದ್ದು ಬಿಳುಪು
ಅವಳು ಕಿತ್ತಿದಳಂತೆ ಇವನ ನೆರೆಗೂದಲು
ಇವಳು ಕಿತ್ತಿದಳು ಕಪ್ಪು ಎಳೆಗೂದಲು.

ಪಟಾಕಿ ಹಚ್ಚಲೇಬೇಕು.
ಮಾಂಸ ತಿನ್ನಲೇಬೇಕು.

(4)

ಶಾಸಕರಿಗೂ ಅನ್ನಭಾಗ್ಯವೇ
ಎಂದು ಹುಬ್ಬೇರಿಸಿ ಜನರ ಹಾಹಾಕಾರ
ಶಾಸಕರನ್ನು ಏನೂ ಅನ್ನದ ಭಾಗ್ಯವೇ
ಎಂದು ಪಬ್ಬಿನಲ್ಲೇರಿಸಿದ ಪತ್ರಿಕಾ ವರದಿಗಾರ

(5)
ತೋಡಿ ನಿಮ್ಮ ಮನೆಯಲ್ಲಿ ಮಳೆನೀರಿನ ಇಂಗುಗುಂಡಿ
ಎಂಗೆ ಅಂದ್ರೆ ರೋಡಲ್ಲಿ ನೋಡಿರಿ 
ಎಲ್ಲಾಕಡೆ ನಿಮಗೆ ಸಿಕ್ಕುವುದು ಮಾದರಿ
ತೋಡಬಹುದು ಕಣ್ರೀ ಇಂಗೂ ಗುಂಡಿ!

(6)
ಎಲ್ಲರಿಗಿಂತಲೂ ಜನಪ್ರಿಯ ಐಯ್ಯಂಗಾರ್! ಗೊತ್ತಾ ನಿಮಗೆ ಯಾಕೆ ರೀ?
ಎಲ್ಲಿ ನೋಡಿದರೂ ಬೋರ್ಡು ಕಾಣಿಸೋದಿಲ್ಲವಾ? ಐಯ್ಯಂಗಾರ್ ಬೇಕರಿ!

(7)
ನಡೆಯಲು ಕಲಿತ ಮೇಲೆ ನಮ್ ಬಿಂದು
ಹೆಸರು ಬದಿಲಿಸಿದ್ದೇವೆ "ರೇಖಾ" ಎಂದು!
ದುಡುದುಡು ಓಡಿ ಹಾಕುತ್ತಾ ಕೇಕೆ
ಬರೆಯುವಳು ಅವ್ಯಕ್ತ ವಕ್ರರೇಖೆ!

(8)
ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ
ಎಂದೆಲ್ಲಾ ಹಾಡಬಾರದಾಗಿತ್ತು ಲೌಡ್ ಸ್ಪೀಕರ್ನಲ್ಲಿ
ಅಥವಾ ಕಟ್ಟಬಾರದಾಗಿತ್ತು ಸಿಟಿಯನ್ನು ಕೆರೆಯಲ್ಲಿ

(9)
ನೂರಾರು ವರ್ಷದ ಹಿಂದೆ ಅಂಟಾರ್ಕ್ಟಿಕಾಗೆ ಹೋಗಿ
ರಾಬರ್ಟ್ ಫಾಲ್ಕನ್ ಸ್ಕಾಟ್ ಎಂಬ ಬ್ರಿಟಿಷ್ ಅಲೆಮಾರಿ
ಬಿಟ್ಟು ಬಂದಿದ್ನಂತೆ ಒಂದು ಫ್ರೂಟ್ ಕೇಕ್ ದುಬಾರಿ
ಚಳಿ ತಾಪಮಾನಕ್ಕೆ ಕೆಡಲೇ ಇಲ್ವಂತೆ ಕಣ್ರೀ

ಸಿಕ್ತಂತೆ ಬೇರೆ ಇನ್ಯಾರೋ ಅಲೆಮಾರಿಗೆ
ಮಗನಿಗೂ ಅಲ್ಲ ಮೊಮ್ಮಗನ ತಲೆಮಾರಿಗೆ
ಯಾರದೋ ಫ್ರೂಟ್ ಕೇಕ್ ತಿನ್ನುವವರು ಇನ್ಯಾರೋ
ಹೀಗಿದ್ರೂ ನಂದು-ನಂದು ಅಂತ ಯಾಕೆ ಒದ್ದಾಡ್ತಾರೋ!

ಪಾಪ ರಾಬರ್ಟ್ ಫಾಲ್ಕನ್ ಸ್ಕಾಟ್ ಕತೆ ನೋಡಿ
ಚಳಿಯಲ್ಲಿ ಹಸಿವಾದ್ರೂ ಸಿಕ್ಲಿಲ್ಲ ತಿಂಡಿ
ಅಷ್ಟು ಸಾಲ್ದೂ ಅಂತ ಮನೆಗೆ ವಾಪಸ್ ಬಂದ್ರೆ
 ಯಾಕ್ರೀ ಬಿಟ್ಟು ಬಂದ್ರೀ ಅಂತ ಹೆಂಡ್ತಿ  ಜೊತೆ ತೊಂದ್ರೆ

(10)
ಅಮೆರಿಕಾದಲ್ಲಿ ನೂರಕ್ಕೆ ಹದಿಮೂರು ಮಂದಿ
ಖಿನ್ನತೆಗೆ ತೆಗೆದುಕೊಳ್ಳುವರು ಔಷಧವೆಂದು ಸುದ್ದಿ
ಹತ್ತು ವರ್ಷದ ಹಿಂದೆ ನೂರಕ್ಕೆ ಹನ್ನೊಂದು ಮಂದಿ
ಹೀಗೆ ನಡೆದಿದೆ ದಾಪುಗಾಲಿಟ್ಟು ಅಭಿವೃದ್ಧಿ

ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)