ಜಗದ ಶೀರ್ಷದ ಮೇಲೆ ಹೊಳೆವ ಮಕುಟ
ಮೂಲ ಹಿಂದಿ ... ಅಟಲ್ ಬಿಹಾರಿ ವಾಜಪೇಯಿ
ಕನ್ನಡಕ್ಕೆ ... ಸಿ.ಪಿ.ರವಿಕುಮಾರ್

ಕೇಳುತ್ತೀಯಲ್ಲ ಜಗತ್ತಿನ ಇತಿಹಾಸ
ಎಲ್ಲಿದೆ ಗ್ರೀಸ್, ಹೇಳು, ಎಲ್ಲಿ ರೋಮನ್ನರ ಸಾಹಸ?
ಹೋಯಿತೆಲ್ಲಿಗೆ ಹೇಳು ಮನೆಮನೆಯಲ್ಲೂ
ಜ್ಯೋತಿ ಸಂಭ್ರಮ ಮೆರೆದ ಇರಾನ್ ದೇಶ?
ಪಶ್ಚಿಮ ಗಗನದ ದೀಪಗಳು ನಂದಿದವು.
ಕವಿದುಕೊಂಡಿತು ಬರ್ಬರ ಅಂಧಕಾರ
ಕತ್ತಲಿನ ಎದೆಯನ್ನು ಸೀಳಿ ಹೊಳೆಯುತ್ತಿಹುದು ಭಾರತ,
ಜಗದ ಹೊಸಬೆಳಕಿನ ಹರಿಕಾರ!
ಒಂದೇ ಎರಡೇ ಎಷ್ಟು ಕೊಡಲಿಪೆಟ್ಟುಗಳು
ಮೌನದಲಿ ಸಹಿಸಿ ಪ್ರತಿಯೊಂದು ಆಘಾತ
ಆದರೂ ಜೀವಂತ, ಆದರೂ ಜ್ವಲಂತ
ಜಗದ ಶೀರ್ಷದ ಮೇಲೆ ಹೊಳೆವ ಮಕುಟ
ಸರ್ ಸೊಗಸಾಗಿದೆ! ಓದಿರಲಿಲ್ಲ! ಧನ್ಯವಾದಗಳು!
ಪ್ರತ್ಯುತ್ತರಅಳಿಸಿಬಹಳ ಸೊಗಸಾಗಿದೆ.. ಧನ್ಯವಾದಗಳು
ಪ್ರತ್ಯುತ್ತರಅಳಿಸಿ